ಮುಳ್ಳೇರಿಯ ಮಂಡಲಾರ್ಗತ ಕುಂಬಳೆ ವಲಯದ ಆಶ್ರಯದಲ್ಲಿ ತಾರೀಕು ಕುಂಬಳೆ ವಲಯೋತ್ಸವವು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು. ಕಾರ್ಯಕ್ರಮವನ್ನು ಕುಂಬಳೆ ವಲಯದ ಹಿರಿಯ ಗುರಿಕ್ಕಾರರಾದ ಶ್ರೀಯುತ ಯಮ್. ರಾಮಕೃಷ್ಣ ಭಟ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಳ್ಳೇರಿಯ ಮಂಡಲದ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಸರ್ಪಮಲೆ ಅವರು ದ್ವಜಾರೋಹಣ ಮಾಡಿದರು. ವಲಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶರ್ಮ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಳ್ಳೇರಿಯ ಸಹಾಯ ವಿಭಾಗದ ಡಾ.ಡಿ.ಪಿ.ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಮಂಡಲದ ಪುರಾಲೇಖ ವಿಭಾಗದ ಪ್ರಧಾನರಾದ ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಅವರು ‘ಮಠದ ಪ್ರಗತಿಯಲ್ಲಿ ಶಿಷ್ಯರ ಪಾತ್ರ’ ವಿಷಯದ ಬಗ್ಗೆ ತನ್ನ ಉಪನ್ಯಾಸದಲ್ಲಿ ಉತ್ತಮ ಮಾಹಿತಿಯನ್ನು ನೀಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಪುರಸ್ಕೃತರಾದ ಆಶುಕವಿ, ಪ್ರಸಂಗಕರ್ತರೂ ಆದ ಶ್ರೀ ವಾಸುದೇವ ಭಟ್ ಶೇಡಿಗುಮ್ಮೆ ಅವರನ್ನು ವಲಯದ ವತಿಯಿಂದ ಮಂಡಲಾಧ್ಯಕ್ಷರಾದ ಶ್ರೀಕೃಷ್ಣ ಭಟ್ ಅವರು ಸನ್ಮಾನಿಸಿದರು ಹಾಗೂ ವಲಯೋತ್ಸವದಲ್ಲಿ ಜರಗಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಿ ವಲಯೋತ್ಸವದ ಔಚಿತ್ಯದ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಮಂಡಲದ ವಿವಿಧ ವಿಭಾಗಗಳ ಪ್ರಧಾನರಾದ ಶ್ರೀ ಸತ್ಯಶಂಕರ ಭಟ್ ಜೀವಿಕಾವಿಭಾಗ , ಶ್ರೀ ಕೃಷ್ಣ ಮೋಹನ ಭಟ್ ಉಲ್ಲೆಖ ವಿಭಾಗದ, ಮಹೇಶ ಸರಳಿ ಶಿಷ್ಯ ಮಾಧ್ಯಮ , ಕೇಶವ ಪ್ರಸಾದ ಎಡಕ್ಕಾನ ವಿದ್ಯಾರ್ಥಿವಾಹಿನಿ, ಶ್ರೀಮತಿ ದೇವಕಿ ಭಟ್ ಪನ್ನೆ ಬಿಂದು-ಸಿಂಧು, ಗೋವಿಂದ ಭಟ್ ವೈ ಕೆ ವೃತ್ತಿಪರ ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಶ್ರೀ ಗೋಪಾಲ ಕೃಷ್ಣ ಭಟ್ ಅವರು ವಲಯ ಪ್ರಗತಿ ಬಗ್ಗೆ ವರದಿ ನೀಡಿದರು. ಶ್ರೀ ನಾರಾಯಣ ಹೆಗ್ಡೆ ಸ್ವಾಗತಿಸಿ ಶ್ರೀ.ಎ.ಕೃಷ್ಣ ಭಟ್ ವಂದಿಸಿದರು. ಶ್ರೀ ಗುರುಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀರಾಮ ತಾರಕ ಮಂತ್ರ ರಾಮಮಂತ್ರ ದ್ವಜಾವರೋಹಣ,ಶಂಖನಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.