ದಾಂಡೇಲಿ : ನಮ್ಮ ದೇಶ ಕಂಡ ಮಹಾನ್ ಸ್ವಾತಂತ್ರ ಹೋರಾಟಗಾರ, ಬ್ರಿಟಿಷರೊಡನೆ ಹೋರಾಡುತ್ತ ದೇಶದಲ್ಲಿಯೇ ಮೊದಲು ಸಾವನ್ನಪ್ಪಿದ ದೊರೆ ಟಿಪ್ಪು ಸುಲ್ತಾನರ ಜನ್ಮ ದಿನಾಚರಣೆಯನ್ನು ಜಾತಿ ಭೇದ ಮರೆತು ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಟಿಪ್ಪು ಬಲಿದಾನ ಅಜಾರಾಮರ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ ದೇಶಪಾಂಡೆ ನುಡಿದರು.
ಅವರು ನಗರದಲ್ಲಿ ಸೋಮವಾರ ಸಂಜೆ ಟಿಪ್ಪು ಸುಲ್ತಾನ ಉತ್ಸವ ಸೆಂಟ್ರಲ್ ಕಮಿಟಿಯಿಂದ ಹಮ್ಮಿಕೊಳ್ಳಲಾದ ಟಿಪ್ಪು ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಟಿಪ್ಪುವಿನ ಜಯಂತಿಯನ್ನು ಅತ್ಯಂತ ಹೆಮ್ಮೆಯಿಂದ ಹಾಗೂ ಗೌರವದಿಂದ ಆಚರಿಸಲು ಮುಂದಾಗಿದೆ. ಮೈಸೂರಿನ ಹುಲಿಯೆಂದೆ ಪ್ರಸಿದ್ಧ ಪಡೆದಿರುವ ಟಿಪ್ಪು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದನ್ನು ಎಂದೆಂದಿಗೂ ಯಾರು ಮರೆಯುವಂತಿಲ್ಲ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್ ಘೋಟ್ನೆಕರ್ ಮಾತನಾಡಿ ಟಿಪ್ಪು ಜೀವಂತವಾಗಿರುವವರೆಗೆ ಬ್ರೀಟಿಷರು ಮೈಸೂರು ರಾಜ್ಯವನ್ನು ತಮ್ಮ ಗುಲಾಮ ರಾಜ್ಯವನ್ನಾಗಿ ಮಾಡಲು ಸಾಧ್ಯವಾಗಿರಲಿಲ್ಲ ಟಿಪ್ಪುವಿನ ಜನ್ಮ ದಿನಾಚರಣೆ ಬಗ್ಗೆ ಕೆಲವರು ಅಪಸ್ವರ ಎತ್ತುತ್ತಿರುವರು ಸರಿಯಲ್ಲ ಎಂದರು.
ಒಂದು ಸಮಯದಲ್ಲಿ ಟಿಪ್ಪುವಿನಂತೆ ಪೇಟಾ ಧರಿಸಿ ಖಡ್ಗ ಹಿಡಿದು ಜೈ ಎಂದವರು ಇಂದು ಜನ್ಮ ದಿನಾಚರಣೆಯ ವಿರೋಧಿಸುತ್ತಿರುವರು ಹಾಸ್ಯಸ್ಪದದ ಸಂಗತಿಯಾಗಿದೆ. ಅಂದು ಟಿಪ್ಪುವಿಗೆ ಹುಲಿ ಎಂದವರು ಇಂದು ಟೀಕೆ ಮಾಡುತ್ತಿರುವದು ಸರಿಯಲ್ಲವೆಂದರು.

RELATED ARTICLES  ಕುಮಟಾ ಭಟ್ಕಳದಲ್ಲಿ ಕದಂಬ ಟ್ರಸ್ಟ್ ಕಛೇರಿಯಲ್ಲಿ " ಸ್ಕಿಲ್ ಇಂಡಿಯಾ" ಪರಿಕಲ್ಪನೆ ಅಡಿಯಲ್ಲಿ ಉದ್ಯೋಗ ತರಬೇತಿ ಕೇಂದ್ರ

ಕಾರ್ಯಕ್ರಮದಲ್ಲಿ ಟಿಪ್ಪುವಿನ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ವಿನಯಾ ಒಕ್ಕುಂದ ಮಾತನಾಡುತ್ತ ಟಿಪ್ಪು ವಿಶ್ವದಲ್ಲಿಯೆ ಮೊದಲು ಮಿಸ್ಯಾಯಲ್ ಕಂಡು ಹಿಡಿದ ವ್ಯಕ್ತಿ, ಕಾವೇರಿ ನದಿಗೆ ನೀರಾವರಿಗಾಗಿ ಕನ್ನಂಬಾಡಿ ಆಣೆಕಟ್ಟಿನ ಶಂಕು ಸ್ಥಾಪನೆ ಹಾಕಿದ ವ್ಯಕ್ತಿ, ದೇಶದಲ್ಲಿ ಮೊದಲು ಭುಸುಧಾರಣೆ ಕಾಯ್ದೆಯನ್ನು, ರೈತರಿಗಾಗಿ 33 ಸಾವಿರ ಕೆರೆ, 14 ಸಾವಿರ ಬಾವಿಗಳನ್ನು ನಿರ್ಮಿಸಿದವ, ರೇಶ್ಮೆ ಉದ್ದಿಮೆ ಆರಂಭಿಸಿದವ, 18 ರಾಜ್ಯದ ಆಡಳಿತ ಕೇಂದ್ರಗಳಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದವ ಚೀನಾ, ಫ್ರಾನ್ಸ್, ಟರ್ಕಿಯೊಂದಿಗೆ ರಾಜಕೀಯ ಸಂಬಂಧ ಬೆಳೆಸಿದವ, ಹಿಂದೂ ದೇವಾಲಯಗಳಿಗೆ ಸಹಾಯ ದಾನ ಮಾಡಿ ಗೌರವಿಸಿದ ವ್ಯಕ್ತಿ, ಸರಾಯಿ-ಜೂಜಾಟ ವೈಶ್ಯಾವಾಟಿಕೆಯನ್ನು ನಿಷೇಧಿಸಿದ ಸುಲ್ತಾನನಾಗಿದ್ದನೆಂದು ಟಿಪ್ಪುವಿನ ಸಾಧನೆ ಕುರಿತು ವಿವರಣೆ ನೀಡಿದರು.

RELATED ARTICLES  ಸೆ. 3 ರಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ 15ನೇ ವರ್ಷದ ಪಟ್ಟಾಭಿಷೇಕ : ವಿಜೃಂಭಣೆಯಿಂದ ನಡೆಯಲಿದೆ ಕಾರ್ಯಕ್ರಮ.

ಡಾ. ಎಮ್.ಡಿ ಒಕ್ಕುಂದ ಮಾತನಾಡಿ ದೇಶದಲ್ಲಿ ಸ್ವಾರ್ಥ ಸಾಧನೆಗಾಗಿ ಹಿಂದೂ-ಮುಸ್ಲಿಂ ಜನರ ಮದ್ಯದಲ್ಲಿ ಐಕ್ಯತೆಯನ್ನು ಒಡೆಯುವ ತಂತ್ರ ಸರಿಯಲ್ಲ, ದೇಶದಲ್ಲಿ ವಾಸಿಸುವರೆಲ್ಲರು ಭಾರತೀಯರೆಂಬ ಸ್ವಾಭಿಮಾನದಿಂದ ಬಾಳಲು ಮುಂದಾಗಬೇಕೆಂದರು.

ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಉಪಾಧ್ಯಕ್ಷ ಮಹಮ್ಮದ್ ಫನಿಬಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ಹಳಿಯಾಳ-ಜೊಯಿಡಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ ರುದ್ರಪಾಟಿ, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಗಿರಿಯಾಳ, ಪ್ಪು ಸುಲ್ತಾನ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ರಿಯಾಜ ಸೈಯದ, ನಗರಸಭಾ ಸದಸ್ಯೆ ರೈಸಾ ಬಿಡಿಕರ್, ಸಮಾಜ ಸೇವಕ ಈಶ್ವರ ಘಟಕಾಂಬಳೆ ಉಪಸ್ಥಿರಿದ್ದರು.
ಟಿಪ್ಪು ಸುಲ್ತಾನ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಗೌಸ ಮೋಹಿದ್ದೀನ್ ಖತೀಬ್ ಸ್ವಾಗತಿಸಿದರು. ಯು.ಎಸ್. ಪಾಟೀಲ ನಿರೂಪಿಸಿದರು. ಆದಂ ದೇಸೂರ ವಂದಿಸಿದರು.