ಹೊನ್ನಾವರ : ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಉದ್ಯೋಗ ಖಾತ್ರಿ ಯೋಜನೆಯ ತಳಪಾಯವಿದಂತೆ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಇಂದು ಮಂಗಳವಾರ ತಾಲೂಕಿನ ಹಳೆಮಠ ಗ್ರಾಮ ಪಂಚಾಯತನಲ್ಲಿ ನಡೆದ 2017-18ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಗ ಯೋಜನೆ ದುಡಿಯುವ ಜನಗಳ ಆಶಾದೀಪವಾಗಿದೆ. ಜೊತೆಗೆ ಗ್ರಾಮೀಣ ಜನರ ಜೀವನೋಪಾಯದ ಮಾರ್ಗಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಲ್ಲಿ ಸಹಾಯಕವಾಗಬಲ್ಲ ಮಹತ್ವದ ಯೋಜನೆಯಾಗಿದೆ. ಪ್ರತಿ ಆರು ತಿಂಗಳು ಕಡ್ಡಾಯವಾಗಿ ನಡೆಯುವ ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ . ಇಂದು ಹಳೆಮಠ ಪಂಚಾಯತದಲ್ಲಿ ಭಾಗವಹಿಸಿರುವ ಸ್ವ ಸಹಾಯ ಸಂಘದ ಸದಸ್ಯರೇ ಇದಕ್ಕೆ ಸಾಕ್ಷಿ ಎಂದರು.

RELATED ARTICLES  ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ನಮ್ಮ ಕಲೆ, ಸಂಸ್ಕೃತಿ ಉಳಿಸಿದವರು : ಶಾಸಕ ದಿನಕರ ಶೆಟ್ಟಿ

ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಇಗೆ ಅತ್ಯಂತ ಉಪಯುಕ್ತವಾಗಿದ್ದು ಗ್ರಾಮೀಣ ಭಾಗವ ಯುವಕರು ಯುವ ಶಕ್ತಿ ಸಂಘಗಳು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಿಕ್ಷಣ ಸಂಯೋಜಕಿ ಶುಭವತಿ ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಶಾಹೀನ ಖಲೀಲ್ ಶೇಖ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಗೌರವ ಬರುವ ರೀತಿಯಲ್ಲಿ ತಾಲೂಕು ಸಂಯೋಜಕರು ನಮ್ಮ ಎಲ್ಲಾ ಗ್ರಾಮದ ಜನರಿಗೆ ಮಾಹಿತಿ ನೀಡಿದ್ದನ್ನು ಈ ಸಂದರ್ಬದಲ್ಲಿ ಸ್ಲಾಘಿಸಿದರು. ಜೊತೆಗೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳ ಜೊತೆಗೂಡಿ ನಿಯಮಾನುಸಾರ ಪಂಚಾಯತದಲ್ಲಿ ಹೆಚ್ಚಿನ ಜನರಿಗೆ ಪ್ರಯೋಜನ ದೊರಕಿಸಿ ಕೊಡುವುದಾಗಿ ತಿಳಿಸಿದರು. ಸಾಮಾಜಿಕ ಪರಿಶೋಧನಾ ವರದಿಯನ್ನು ಗ್ರಾಮಸಂಪನ್ಮೂಲ ವ್ಯಕ್ತಿ ರಾಜು ನಾಯ್ಕ ಸಭೆಯಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಟ್ಟರು. ನಂತರ ಗ್ರಾಮಸಭಾ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡಲಾಯಿತು.

RELATED ARTICLES  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣಗಳ ರಕ್ಷಣೆ : ಬೆಂಗಾವಲಿಗೆ ಬಂದ ಇನ್ನೋವಾ ಕಾರ್ ಪೊಲೀಸ್ ವಶಕ್ಕೆ.

ಎಪ್ರಿಲ್ -ಸೆಪ್ಟಂಬರ್ 2017ರವರೆಗೆ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ ಓದಿ ಹೇಳಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಗಣೇಶ ಆಚಾರ್ ,ಪಂಚಾಯತ ಸದಸ್ಯರಾದ ಜಾಕೀರ್ ಹುಸೇನ್ ಕಟಿಂಗಿರಿ, ಹಾಜಿಕಾ ಅಬ್ದುಲ್ ಗಪುರ್ ಖಾದಿರ ಮೀರಾ, ಉಲ್ಲಾಸ ನೇಮಯ್ಯ ನಾಯ್ಕ, ಸುಮತಿ ಶ್ರೀಧರ್ ನಾಯ್ಕ, ಪಾರ್ವತಿ ಗಣಪತಿ ನಾಯ್ಕ, ಗೀತಾ ರಮಾಕಾಂತ ಹರಿಕಾಂತ, ಹನೀಪ್ ಹುಸೇನ್ ದೊಣ್ಣಾ, ಹಫೀಜಾ ಇಸಾಕ್ ಹಂಪಾ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಎನ್.ಕೆ.ಭಟ್, ರಾಧಾ ನಾಯ್ಕ ಮತ್ತು ನೂರಕ್ಕೂ ಅಧಿಕ ಕಾರ್ಡದಾರರು ಹಾಜರಿದ್ದರು.
ಪಂಚಾಯತ ಸಿಬ್ಬಂಧಿ ಶ್ರೀನಿವಾಸ ಎಚ್ ಸ್ವಾಗತಿಸಿದರು, ಮಂಜುನಾಥ ನಾಯ್ಕ ವಂದಿಸಿದರು. ಪಲ್ಲವಿ ನಾಯ್ಕ ನಿರ್ವಹಿಸಿದರು.