ಮುಂಡಗೋಡ : ಬರಗಾಲದಿಂದ ತತ್ತರಿಸುತ್ತಿರುವ ಮುಂಡಗೋಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡುವಂತೆ ಶಾಸಕ ಶಿವರಾಂ ಹೆಬ್ಬಾರ ನೇತೃತ್ವದ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎಮ್.ಬಿ.ಪಾಟೀಲರಿಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಮನವಿ ಸಲ್ಲಿಸಿದೆ.

ಮುಂಡಗೋಡ ತಾಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು ಹೆಚ್ಚು ಕಡಿಮೆ ಬಯಲು ಸೀಮೆ ಪ್ರದೇಶವಾಗಿದ್ದು, ಪ್ರತಿ ವರ್ಷ ಈ ಭಾಗದಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಕೆರೆಗಳಲ್ಲಿ ನೀರು ತುಂಬದೆ ಬರಿದಾಗಿ ಕೃಷಿ ಬೆಳೆಗಳನ್ನು ಬೆಳೆಯಲು ತೊಂದರೆಯಾಗುತ್ತಿದೆ. ಕುಡಿಯುವ ನೀರಿಗೆ ಅಭಾವ ಎದುರಾಗುತ್ತದೆ. ಕಳೆದ 3-4 ವರ್ಷಗಳಿಂದ ಜಿಲ್ಲೆಯಲ್ಲಿ ಸತತ ಬರಗಾಲವಿದ್ದು ಸರಕಾರ ಕೂಡ ಈ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಹೀಗಾಗಿ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹರಿಯುವ ಬೇಡ್ತಿ ನದಿಯಿಂದ ತಾಲೂಕಿನ ಕರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಿದ್ದ ಪಡಿಸಿದ್ದು ಈ ಯೋಜನೆಗೆ ತ್ವರಿತ ಮಂಜೂರಾತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಚನ್ನಮಲ್ಲ ಸ್ವಾಮಿಗಳು

ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗೀಮಠ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಚ್.ಎಮ್.ನಾಯ್ಕ, ಕೆ.ಆರ್.ಬಾಳೆಕಾಯಿ, ಮಾರ್ಕೇಟಿಂಗ್ ಸೊಸೈಟಿ ಸದಸ್ಯ ಡವಳೆ, ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ ಉಪಸ್ಥಿತರಿದ್ದರು.

RELATED ARTICLES  ಶ್ರೀವೀರಾಂಜನೇಯ ಪ್ರತಿಷ್ಠಾನದ ಎರಡನೇ ವರ್ಷದ “ವೀರಾಂಜನೇಯ ಪುರಸ್ಕಾರ" ಪ್ರದಾನ