ನವದೆಹಲಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬಹುನಿರೀಕ್ಷಿತ ತ್ರಿವಳಿ ತಲಾಖ್ ಮಸೂದೆ ಮಂಡಿಡಸಲು ಸಿದ್ದತೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ನೂತನ ಕಾನೂನು ರೂಪಿಸಲು ಮಂತ್ರಿಪರಿಷತ್‌ವೊಂದನ್ನು ರಚಿಸಲಾಗಿದೆ.

ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಮೂರು ಬಾರಿ ತಲಾಕ್ ಪದವನ್ನು ಒಂದೇ ಉಸಿರಿನಲ್ಲಿ ಉಚ್ಚರಿಸಿ ಪತ್ನಿಗೆ ವಿಚ್ಛೇದನೆ ನೀಡುವ ಕ್ರಮವು ಸ್ವೇಚ್ಚಾಚಾರದ್ದೂ ಅಸಾಂವಿಧಾನಿಕವಾದುದೂ ಆಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಈ ಹಿಂದೆ ಹೇಳಿತ್ತು.

RELATED ARTICLES  ನಟ ಚೇತನ್ ಕ್ಷಮೆಯಾಚನೆಗೆ ಹವ್ಯಕ ಮಹಾಸಭೆ ಆಗ್ರಹ

ಇನ್ನು, ನ್ಯಾ.ಜೆ.ಎಸ್. ಖೇಹರ್, ನ್ಯಾ. ಕುರಿಯನ್ ಜೋಸೆಫ್, ರೊಹಿನ್‌ಟನ್ ಎಫ್. ನಾರಿಮನ್, ನ್ಯಾ.ಯು ಯು ಲಲಿತ್ ಮತ್ತು ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಪೀಠ, ತ್ರಿವಳಿ ತಲಾಕ್ ಕುರಿತ ವಿಭಿನ್ನ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ೩:೨ ಬಹುಮತದಲ್ಲಿ ತಲಾಕ್ ಎ ಬಿದ್ದತ್ ಎಂಬ ತ್ರಿವಳಿ ತಲಾಕ್ ಪದ್ಧತಿಯನ್ನು ನಾವು ಕಾನೂನು ಬಾಹಿರವೆಂದು ಅನೂರ್ಜಿತಗೊಳಿಸುತ್ತಿದ್ದೇವೆ ಎಂದು ಹೇಳಿತ್ತು.

RELATED ARTICLES  27 ವರ್ಷ ದೇಶಸೇವೆ ಮಾಡಿ ಜನ್ಮದಿನದಂದೇ ವೀರಸ್ವರ್ಗ ಸೇರಿದ ಯೋಧ!