ಭಾರೀ ವಿವಾದಕ್ಕೆ ಕಾರಣವಾಗಿರುವ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರ ಬಿಡುಗಡೆ ದಿನಾಂಕ 2018ಕ್ಕೆ ಮುಂದೂಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಚಿತ್ರದ ಕುರಿತಾಗಿ ಹಲವಾರು ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವ ಹಾಗೂ ಸೆನ್ಸಾರ್ ಬೋರ್ಡ್‌ನಿಂದ ಇನ್ನೂ ಸರ್ಟಿಫಿಕೇಟ್ ದೊರೆಯದೇ ಇರುವ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು 2018ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

RELATED ARTICLES  #BeefFest ಗೆ ಪ್ರತಿಯಾದ #BeliefFest

ಚಿತ್ರಕ್ಕಾಗಿ ನಿರ್ಮಾಪಕರು 190 ಕೋಟಿ ರೂ. ವ್ಯಯಿಸಿದ್ದಾರೆ. ಪ್ರಸ್ತುತ ಬಾರೀ ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯಲ್ಲಿ ಬಿಡುಗಡೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

RELATED ARTICLES  ಚಾಣಾಕ್ಷ ನಡೆಯತ್ತ ಎಲ್ಲರ ಚಿತ್ತ! ಅಖಾಡಕ್ಕೆ ಅಮಿತ್ ಶಾ, ಶುರುವಾಯ್ತು BJP ಆಟ

ಈ ಹಿಂದೆ ಡಿಸೆಂಬರ್ 1 ರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರದ ಕುರಿತಾಗಿ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಅಲ್ಲದೇ, ಸೆನ್ಸಾರ್ ಬೋರ್ಡ್ ಸಹ ಚಿತ್ರಕ್ಕೆ ಗ್ರೀನ್ ಸಿಗ್ನಲ್ ತೋರಿಸದೇ, ತಾತ್ಕಾಲಿಕವಾಗಿ ಆದೇಶವನ್ನು ಸ್ಥಗಿತಗೊಳಿಸಿದೆ.