ನವದೆಹಲಿ: ಕೋಮಾದಲ್ಲಿರುವ ವ್ಯಕ್ತಿಯ ವ್ಯಕ್ತಿಯ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ. ಆ ವ್ಯಕ್ತಿ ಯಾವ ಹಂತದಲ್ಲಿದ್ದಾನೆ ಹಾಗೂ ಯಾವಾಗ ಕೋಮಾದಿಂದ ಹೊರ ಬರುತ್ತಾನೆ ಎಂಬ ವಿಚಾರವನ್ನು ಊಹಿಸುವ ನೂತನ ಆವಿಷ್ಕಾರವನ್ನು ವಿಜ್ಞಾನಿಗಳ ಮಾಡಿದ್ದಾರೆ.
ಈ ಕುರಿತ ನಿಖರ ಮಾಹಿತಿ ಮತ್ತು ಮುನ್ನೆಚ್ಚರಿಕಾ ಮಾಹಿತಿ ಹಾಗೂ ಕೋಮಾದಲ್ಲಿರುವ ವ್ಯಕ್ತಿಯ ಮೆದುಳು ಕಾರ್ಯದ ಕುರಿತು ತಿಳಿಯುವುದು ಸಾಮಾನ್ಯದ ಕೆಲಸವಲ್ಲ. ಇದೊಂದು ಸವಾಲಿನ ಕಾರ್ಯವಾಗಿದೆ. ಅದರಲ್ಲೂ ಪ್ರಮುಖವಾಗಿ ವಿವಿಧ ಕಾರಣಗಳಿಂದ ಗಂಭೀರ ಹಾನಿಗೆ ಒಳಗಾದ ವ್ಯಕ್ತಿಯ ಮೆದುಳು ಕುರಿತಾಗಿ ವೈದ್ಯಕೀಯ ಕ್ಷೇತ್ರದಲ್ಲ ಒಂದು ಸವಾಲಿನ ಕಾರ್ಯವೇ ಆಗಿದೆ.
ಈ ನಿಟ್ಟಿನಲ್ಲಿ ಕೋಮಾದಲ್ಲಿರುವ ವ್ಯಕ್ತಿಯ ಗ್ಲೂಕೋಸ್‌ನ ಪ್ರಮಾಣವನ್ನು ಆತನ ಮೆದಳು ಎಷ್ಟು ಪ್ರಮಾಣದಲ್ಲಿ ಬಳಿಸಿಕೊಳ್ಳುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಕೋಮಾದಲ್ಲಿರುವ ವ್ಯಕ್ತಿಯ ಪ್ರಸ್ತುತ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ. ಇದೇ ವೇಳೆ ವ್ಯಕ್ತಿ ಯಾವಾಗ ಚೇತರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಊಹಿಸುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಮೆರಿಕಾದ ಯಾಲೆ ವಿಶ್ವಿವಿದ್ಯಾಲಯದ ವಿಜ್ಞಾನಿ ರೌನ್ ಕುಪರ್, ಈ ಮಾರ್ಗದ ಮೂಲಕ ಬಹುತೇಕ ಪ್ರಕರಣಗಳಲ್ಲಿ ಸಂಪೂರ್ಣ ಮೆದುಳಿನ ಸಾಮರ್ಥ್ಯ ಹಾಗೂ ಕಾರ್ಯವನ್ನು ಗುರುತಿಸಿ, ಭವಿಷ್ಯದಲ್ಲಿ ಆಗಬಹುದಾದ ಸಾಧ್ಯತೆಗಳನ್ನು ಊಹಿಸಲು ಸಾಧ್ಯವಿದೆ ಎಂದಿದ್ದಾರೆ.