ಕಾರವಾರ: ನಗರದ ಮುಖ್ಯ ಅಂಚೆ ಕಚೇರಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಗಾವಲು ನಡೆಸುತ್ತಿದ್ದ ಅಬಕಾರಿ ಪೊಲೀಸರು, ದ್ವಿಚಕ್ರ ವಾಹನದಲ್ಲಿ ಸಾಗಿಸಲಾಗುತ್ತಿದ್ದ 45 ಸಾವಿರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಮಂಗಳವಾರ ವಾಹನ ಸಮೇತ ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಬೆಳಗಿನ ಜಾವ ರಸ್ತೆಗಾವಲು ನಡೆಸಿದ ಸಂದರ್ಭದಲ್ಲಿ ಇದು ಪತ್ತೆಯಾಗಿದೆ. ಆದರೆ ಅಬಕಾರಿ ಪೊಲೀಸರನ್ನು ಸಮವಸ್ತ್ರದಲ್ಲಿ ಕಂಡ ಆರೋಪಿಯು ತನ್ನ ಹೊಂಡಾ ಆ್ಯಕ್ಟೀವಾ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪರಾರಿಯಾದ ವ್ಯಕ್ತಿಯನ್ನು ಗಜಾ ಬಾನಾವಳಿಕರ ಎಂದು ಗುರುತಿಸಲಾಗಿದೆ.

RELATED ARTICLES  ಅಡಿಕೆ ದಲಾಲರಾದ ನಾರಾಯಣ ಭಟ್ ನಿಧನ

ಈ ವೇಳೆ ಸುಮಾರು 45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ವಾಹನದಲ್ಲಿ ದೊರೆತಿದ್ದು, ವಾಹನ ಸಮೇತ ಅದನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

RELATED ARTICLES  ಸರಸ್ವತಿ ಪಿ.ಯು ಕಾಲೇಜಿನಲ್ಲಿ ಭಕ್ತಿ ಭಾವದಿಂದ ನೆರವೇರಿದ ಶಾರದಾ ಪೂಜೆ

ಅಬಕಾರಿ ಉಪ ಆಯುಕ್ತ ಎನ್.ಶ್ಯಾಮ ಜೋಯಿಸ್ ನಿರ್ದೇಶನದಲ್ಲಿ, ಅಪಕಾರಿ ಉಪ ಆಯುಕ್ತ ಎಂ.ವಿ.ಅರೆಗುಳಿ ಮಾರ್ಗದರ್ಶನದಲ್ಲಿ, ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಬಕಾರಿ ರಕ್ಷಕರಾದ ಎಸ್.ವೈ.ಭೋವಿ, ಎನ್.ಎನ್.ಖಾನ್, ಚಾಲಕ ಶಾನೂರ ಜಮಾದಾರ, ಅರುಣ ಅಂಕೋಲೇಕರ ದಾಳಿಯಲ್ಲಿ ಪಾಲ್ಗೊಂಡಿದ್ದರು.