ಕಾರವಾರ: ಮೈಸೂರಿನಲ್ಲಿ ನ. 24 ರಿಂದ 26 ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರಕಾರಿ ನೌಕರರಿಗೆ, ಕಾಲೇಜು ಉಪನ್ಯಾಸಕರಿಗೆ, ಶಿಕ್ಷಕರಿಗೆ ಒ.ಒ.ಡಿ. (ಅನ್ಯ ಕಾರ್ಯ ನಿಮಿತ್ತ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.

RELATED ARTICLES  ಇನ್ನೂ ಮೂರು ದಿನ ಮಳೆ : ಯೆಲ್ಲೋ ಅಲರ್ಟ ಘೋಷಣೆ.

ಸಮ್ಮೇಳನದಲ್ಲಿ ಭಾಗವಸಿದ ಉತ್ತರ ಕನ್ನಡ ಜಿಲ್ಲೆಯ ನೌಕರರು ನ.26 ರಂದು ಮೈಸೂರಿನಲ್ಲಿ ಸತಃ ತಮ್ಮನ್ನು ಸಂಪರ್ಕಿಸಿದರೆ ಮಾತ್ರ ಒ.ಒ.ಡಿ. ಸೌಲಭ್ಯದ ಪ್ರಮಾಣ ಪತ್ರವನ್ನು ತಾವು ನೀಡುವುದಾಗಿ ಅರವಿಂದ ಕರ್ಕಿಕೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಭಾರೀ ಮಳೆಯ ನಿರೀಕ್ಷೆ : ಹವಾಮಾನ ಇಲಾಖೆ ಮುನ್ಸೂಚನೆ.