ಭಟ್ಕಳ: ಕರಾವಳಿ ಕಾವಲು ಪಡೆ ಹಾಗೂ ಗ್ರಾಮೀಣ ಪೋಲೀಸರ ಜಂಟಿ ಕಾರ್ಯಾಚರಣೆಯಲ್ಲಿ ತಾಲೂಕಿನ ಬಂದರ್‍ನಲ್ಲಿ ಕೋಸ್ಟಲ್ ಪೊಲೀಸ್ ಪಡೆಯಿಂದ 4 ಮಂದಿ ರೆಡ್ ಫೋರ್ಸ್ ಸಿಬ್ಬಂದಿಯನ್ನು ಬಂಧಿಸಿ ಬಿಡುಗಡೆಗೊಳಿಸುವುದರ ಮೂಲಕ ಸಾಗರ ಕವಚ ಅಣಕು ಪ್ರದರ್ಶನ ನಡೆಯಿತು.

ಬಾಂಬ್ ಇಡುವುದು ಮತ್ತು ಅವರನ್ನು ಬಂಧಿಸಿರುವುದು ನಿಜವಾದರೂ ಇದು ಕೇವಲ ಅಣಕು ಕಾರ್ಯಚರಣೆ. ಆರು ತಿಂಗಳಿಗೆ ಒಮ್ಮೆ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್, ನೇವಿ ಸಿಬ್ಬಂದಿ, ಸಿಎಸ್‍ಆರ್ ಫೋರ್ಸ್ ಸಿಬ್ಬಂದಿಯನ್ನು ಜಾಗೃತಗೊಳಿಸುವ ಸಲುವಾಗಿ ಜಿಲ್ಲೆಯ ಕರಾವಳಿ ಸೇರಿದಂತೆ ದೇಶದ ಕರಾವಳಿ ರಾಜ್ಯಗಳ ಕರಾವಳಿಯಲ್ಲಿ ಜಾಗೃತ ಕಾರ್ಯಾಚರಣೆಯಾದ ಸಾಗರ ಕವಚ ನಡೆಸುವುದು ವಾಡಿಕೆ. ವಿವಿಧ ಇಲಾಖೆಗಳಲ್ಲಿ ಕರ್ತವ್ಯ ಮಾಡುವ ಸಿಬ್ಬಂದಿಯೇ ಮಾರುವೇಷದಲ್ಲಿ ಬಂದು ಪೊಲೀಸರ ಕಣ್ಣು ತಪ್ಪಿಸಿ, ಆಯಕಟ್ಟಿನ ಜಾಗದಲ್ಲಿ ನಕಲಿ ಬಾಂಬ್ ಇಡುವ ಕೃತ್ಯ ಮಾಡುತ್ತಾರೆ. ಇದನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿ ಪೊಲೀಸರು ಪತ್ತೆ ಹಚ್ಚಬೇಕು. ಹಾಗೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರೆ, ಕರ್ತವ್ಯದಲ್ಲಿರುವ ಸಿಬ್ಬಂದಿ ಚುರುಕುತನಕ್ಕೆ ಸಾಕ್ಷಿಯಾದಂತೆ. ನಕಲಿ ಬಾಂಬ್ ಪತ್ತೆ ಹಚ್ಚದೇ ಹೋದಲ್ಲಿ ಕರ್ತವ್ಯ ನಿರತ ಸಿಬ್ಬಂದಿಯ ವಿಫಲತೆಗೆ ಸಾಕ್ಷಿ.

RELATED ARTICLES  ಶಾಸಕರಿಂದ‌ ಸಾಧನೆಯ ಅವಲೋಕನ : ಪುನರಾಯ್ಕೆಯ ಭರವಸೆ ಇದೆ ಎಂದ ಶಾರದಾ ಶೆಟ್ಟಿ.