ಕಾರವಾರ: ‘ಮೀನುಗಾರಿಕಾ ಇಲಾಖೆ ವತಿಯಿಂದ ನಡೆಸಲಾಗಿದ್ದ ದೋಣಿ ತಪಾಸಣೆಯಲ್ಲಿ ಜಿಲ್ಲೆಯ ಕೆಲ ಮೀನುಗಾರರ ಹೆಸರು ತಪ್ಪಿದ್ದು, ಅವರಿಗೂ ರಿಯಾಯತಿ ದರದಲ್ಲಿ ಅವರ ದೋಣಿಗಳಿಗೆ ಅವಶ್ಯವಿರುವ ಸೀಮೆಎಣ್ಣೆ ವಿತರಿಸಬೇಕು’ ಎಂದು ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್‌ಗೆ ಒತ್ತಾಯಿಸಿದರು.

‘ಸರ್ಕಾರ ಬಡ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. ಮಳೆಗಾಲದ ನಂತರ ದೋಣಿಗಳ ಸಮೀಕ್ಷೆ ನಡೆಸಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಸಲಾಗುತ್ತದೆ. 2017ರ ಜುಲೈ ಕೊನೆಯ ವಾರದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅಧಿಕಾರಿಗಳು ಕಾಟಾಚಾರಕ್ಕೆ ಈ ಕೆಲಸ ಮಾಡಿದಂತಿದೆ. ಸಮೀಕ್ಷೆಯಲ್ಲಿ ಹಲವು ಪಲಾನುಭವಿಗಳ ಹೆಸರು ಕೈ ತಪ್ಪಿದೆ. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆಯಿಂದ ನೈಜ ಪಲಾನುಭವಿಗಳು ವಂಚಿತರಾಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

RELATED ARTICLES  ಮೊಟ್ಟೆ ಇಡಲು ಜಾಗ ಹುಡುಕುತ್ತಿದ್ದ ಕಾಳಿಂಗ ಸರ್ಪ ಕಂಡ ಜನರು ಕಂಗಾಲು.

‘ಬಡ ಮೀನುಗಾರರಿಗೆ ಅವಶ್ಯವಿರುವ ಸೀಮೆಎಣ್ಣೆ ವಿತರಿಸದಿದ್ದರೆ ಮೀನುಗಾರಿಕೆ ನಡೆಸುವುದು ಕಷ್ಟವಾಗುತ್ತದೆ. ಅವರ ಕುಟುಂಬ ಬೀದಿಗೆ ಬರುತ್ತದೆ. ಇದರಿಂದ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದ್ದು, ಇದನ್ನು ತಪ್ಪಿಸಲು ಎಲ್ಲ ಬಡ ಮೀನುಗಾರರಿಗೂ ಯೋಜನೆ ಲಭ್ಯವಾಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 179 ಜನರಲ್ಲಿ ಕೊರೋನಾ ಪಾಸಿಟಿವ್ : ಓರ್ವ ಸಾವು