ಶಿವಮೊಗ್ಗ: ಕೋಟೆರಸ್ತೆಯ ಸರ್ಕಾರಿ ಮಹಿಳಾ ಹಾಸ್ಟೆಲ್ ಪಕ್ಕದಲ್ಲಿ ಪಾಲಿಕೆಗೆ ಸೇರಿರುವ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ಯುಜಿಡಿ ಪ್ಲಾಂಟ್‌ನ ನಿರ್ಮಾಣಕ್ಕೆ ಕೋಟೆ ನಾಗರಿಕ ಹಿತರಕ್ಷಣಾ ಸಮಿತಿಯು ವಿರೋಧ ವ್ಯಕ್ತಪಡಿಸಿದೆ.

ಈ ಸ್ಥಳದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಪಾರ್ಕ್, ಸುಸಜ್ಜಿತ ಗ್ರಂಥಾಲಯ ಮತ್ತು ಮಕ್ಕಳ ಆಟದ ಮೈದಾನ ನಿರ್ಮಿಸುವಂತೆ ವಿನಂತಿಸಿದ್ದರೂ, ಪಾಲಿಕೆಯ ಜಾಗಗಳನ್ನು ಖಾಸಗಿ ಶಾಲೆಗಳಿಗೆ ದೇವಸ್ಥಾನಗಳಿಗೆ, ಸಂಸ್ಥೆಗಳಿಗೆ ನೀಡಿತ್ತು. ಈ ಪ್ರದೇಶದ ಜನರ ಮಕ್ಕಳಿಗೆ ಆಟದ ಮೈದಾನ ಹಾಗೂ ಸುಸಜ್ಜಿತ ಪಾರ್ಕ್ ಇಲ್ಲದೇ ಇರುವುದರಿಂದ ಆ ಜಾಗದಲ್ಲಿ ಪಾರ್ಕ್, ಸುಸಜ್ಜಿತ ಗ್ರಂಥಾಲಯ ಮತ್ತು ಮಕ್ಕಳ ಆಟದ ಮೈದಾನ ನಿರ್ಮಿಸಲು ಅತ್ಯವಶ್ಯಕವಾಗಿದೆ ಎಂದಿದ್ದಾರೆ.

RELATED ARTICLES  ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಮಾತ್ರಕ್ಕೆ ಅಭ್ಯರ್ಥಿ ಟಿಕೆಟ್ ಫೈನಲ್ ಅಲ್ಲ:ಈಶ್ವರಪ್ಪ ಟಾಂಗ್

ಆ ಜಾಗದಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಕಟ್ಟಡ ಕಟ್ಟಿರುವುದರ ಬಗ್ಗೆ ಪಾಲಿಕೆ ಗಮನಕ್ಕೆ ತಂದಿದ್ದು, ಅದು ಈಗ ತೆರವಾಗಿದೆ. ಈಗ ಆ ಜಾಗದಲ್ಲಿ ಇಂದಿರ ಕ್ಯಾಂಟೀನ್ ಮತ್ತು ಯುಜಿಡಿ ಪ್ಲಾಂಟ್ ಮಾಡಲು ಮಹಾನಗರ ಪಾಲಿಕೆಯವರು ಅಳತೆ ಮಾಡಿದ್ದಾರೆ. ಈ ಪ್ರದೇಶದ ಪಕ್ಕದಲ್ಲೇ ದೊಡ್ಡಚರಂಡಿ ಹಾದುಹೋಗಿದ್ದು, ಹಾಗೂ ಕೆಳಭಾಗದಲ್ಲಿ ಯುಜಿಡಿ ಪೈಪ್ ಹಾದು ಹೋಗಿರುವುದು ಹಾಗೂ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿದ್ದು, ಈ ಪ್ರದೇಶ ಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇದರಿಂದ ಇವೆರಡೂ ಈ ಸ್ಥಳದಲ್ಲಿ ಬೇಡ ಎಂದು ಹೇಳಿದ್ದಾರೆ.

ಸ್ಥಳೀಯ ಜನರಿಗೆ ಹಾಗೂ ಹಾಸ್ಟೆಲ್ ಹೆಣ್ಣು ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತದೆ. ಹಾಗೂ ಕ್ಯಾಂಟೀನ್ ಹಿಂಭಾಗದಲ್ಲಿ ಯು.ಜಿ.ಡಿಯ ಪ್ಲಾಂಟ್ ಇರುವುದರಿಂದ ಆಹಾರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇಂದಿರಾ ಕ್ಯಾಂಟೀನ್‌ನ್ನು ಕಡುಬಡವರು, ಕೂಲಿ ಕಾರ್ಮಿಕರು ಹೆಚ್ಚಿರುವ ಪ್ರದೇಶದಲ್ಲಿ ಮತ್ತು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್ ನಿರ್ಮಿಸುವುದು ಸೂಕ್ತ ಹಾಗೂ ಯುಜಿಡಿ ಪ್ಲಾಂಟ್‌ನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ನಿರ್ಮಿಸುವಂತೆ ಕೋಟೆ ನಾಗರಿಕ ಹಿತರಕ್ಷಣಾ ಸಮಿತಿಯು ವಿನಂತಿಸಿದೆ.

RELATED ARTICLES  ಇಬ್ಬರನ್ನು ಬಿಟ್ಟರು, ಆರು ಜನರನ್ನು ಬಂಧಿಸಿದರು? ಮತ್ತೆ ಉಲ್ಬಣವಾಗುವ ಹಂತದಲ್ಲಿ ಭಟ್ಕಳ ಪ್ರಕರಣ

ಒಂದು ವೇಳೆ ಸ್ಥಳೀಯ ವಿರೋಧದ ನಡುವೆಯು ನಿರ್ಮಿಸಲು ಮುಂದಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರು ಮತ್ತು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.