ಚಿಕ್ಕೋಡಿ: ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನವರು ಮಾಜಿ ಸಿಎಂ ಯಡಿಯೂರಪ್ಪಗೆ ಸವಾಲು ಹಾಕಿದರು. ಯಡಿಯೂರಪ್ಪನವರೇ ನಿಮಗೆ ಧಮ್ ಇದ್ದರೆ ಒಂದೇ ವೇದಿಕೆಗೆ ಬನ್ನಿ, ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಸವಾಲೆಸೆದರು. ನಮ್ಮ ತಪ್ಪುಗಳನ್ನು ನೀವು ಹೇಳಿ, ನಿಮ್ಮ ತಪ್ಪುಗಳನ್ನು ನಾನು ಹೇಳುತ್ತೇನೆ ಎಂದರು.

RELATED ARTICLES  ಸಾರ್ವಕಾಲಿಕ ಗರಿಷ್ಟ ದರ :ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ.

ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ನೂರು ಬಾರಿ ಸುಳ್ಳನ್ನೇ ಹೇಳಿ ಅದನ್ನೇ ಸತ್ಯ ಮಾಡುತ್ತಾರೆ ಎಂದು ಜರಿದರು. ನೀವು ಜೈಲಿಗೆ ಹೋಗಿ ಬಂದವರು ಎಂದು ಯಡಿಯೂರಪ್ಪರನ್ನು ಕುಟುಕಿದರು. ನಿಮ್ಮ ಕಾಲದಲ್ಲಿ ಎಷ್ಟು ಜನ ಜೈಲಿಗೆ ಹೋಗಿದ್ದರು. ಅವರೆಲ್ಲಾ ಏನು ನಂಟಸ್ಥಿಕೆ ಮಾಡಲು ಜೈಲಿಗೆ ಹೋಗಿದ್ದರಾ ಎಂದು ವ್ಯಂಗ್ಯವಾಡಿದರು. ಡಿಸೆಂಬರ್ 15ರಂದು ಕಳಸಾ ಬಂಡೂರಿಗೆ ನೀರು ಹರಿಸುವ ಬಗ್ಗೆ ಮಾತನಾಡಿದ ಸಿಎಂ ಇದಕ್ಕಿಂತ ಬಿಜೆಪಿಯವರ ಹಸಿ ಸುಳ್ಳು ಮತ್ತೊಂದಿಲ್ಲ. ಅವರು ಸಮಸ್ಯೆ ಬಗೆಹರಿಸಿದರೆ ಸಂತೋಷ ಎಂದರು.

RELATED ARTICLES  ತಮ್ಮ ವಾಹನಕ್ಕೆ ತಾವೇ ದಂಡ ವಿಧಿಸಿದ ಪೋಲೀಸರು.