ಕುಮಟಾ : ಹಾಲಕ್ಕಿ ಒಕ್ಕಲಿಗರ ಸಂಘದ ಸಭಾಭವನದ ಶಿಲಾನ್ಯಾಸ ಹಾಗೂ ಗುರುವಂದನಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ದಿವಗಿಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ, ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಮತ್ತು ಸಂಸ್ಥಾನದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೆ ಕುಮಟಾ ಹಾಲಕ್ಕಿ ಒಕ್ಕಲಿಗರು ಹೃದಯಸ್ಪರ್ಶಿ ಸ್ವಾಗತ ಕೋರಿದರು. ಕುಮಟಾ ಮತ್ತು ಹೊನ್ನಾವರ ತಾಲೂಕಿನ ಒಕ್ಕಲಿಗ ಸಮಾಜದ ಯುವಕರಿಂದ ಸಾವರಿಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೋಟರ್ ಸೈಕಲ್ ರ್ಯಾಲಿ,ಮತ್ತು ಸುಗ್ಗಿ ಕುಣಿತ, ಮರಕಾಲಕುಣಿತ, ವಾದ್ಯ, ಇನ್ನಿತರ ಕಲಾತಂಡದೊಂದಿಗೆ ಬೃಹತ್ ಮೆರವಣಿಗೆ ಕುಮಟಾ ಪಟ್ಟಣದ ರಂಗು ಹೆಚ್ಚಿಸುವ ಜೊತೆಗೆ ಒಕ್ಕಲಿಗ ಸಮುದಾಯದ ಶಕ್ತಿ ಪ್ರದರ್ಶನವಾಯಿತು.

ಸಮುಧಾಯ ಭವನ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರ್ಮಿಕ ವಿಧಿವಾಧಾನಗಳಿಂದ ಅಡಿಗಲ್ಲು ಕಾರ್ಯಕ್ರಮವನ್ನು ನೆರವರಿಸಲಾಯಿತು.. ಬಳಿಕ ಸಭಾ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಸಾಂಸ್ಥನದ ಪೀಠಾಧ್ಯಕ್ಷರಾದ ಡಾ, ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು, ಈ ವೇಳೆ ಶ್ರೀ ಆದಿಚುಂಚನಗಿರಿ ಮಹಸಾಂಸ್ಥನದ ಪೀಠಾಧ್ಯಕ್ಷರಾದ ಡಾ, ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಒಕ್ಕಲಿಗ ಸಮುಧಾಯದ ಗಣ್ಯರು ಹಾಗೂ ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾ ವತಿಯಿಂದ ನಡೆಸಲಾಯಿತು. ಕೀರಿಟ ತೋಡಿಸಿ ಪುಷ್ಪ ಮಳೆ ಗೈಲಾಯಿತು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? 

ನಂತರ ಮಾತನಾಡಿದ ಸ್ವಾಮಿಜಿಗಳು ನಮ್ಮ ಸಮಾಜ ನಮ್ಮ ಸಮುಧಾಯದ ಸಮೃದ್ದಿಗೊಸ್ಕರ ಮನಸ್ಸು ಮಾಡಿರುವುದು ನಮ್ಮ ದೇಶದ ಮತ್ತು ದೇಶದ ಸಂಘಟನೆಯ ಅಭಿವೃದ್ದಿ ಕಡೆಗೆ ಮನಸ್ಸು ಮಾಡಿರುವುದು ಸಂತೋಷದ ವಿಷಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು ಹಾಲಕ್ಕಿ ಒಕ್ಕಲಿಗರ ಸಮುದಾಯ ಕೃಷಿಯನ್ನು ಮಾಡುವ ಸಮುದಾಯ, ಕೃಷಿಕರು ಎಲ್ಲಿ ಚೆನ್ನಾಗಿರುತ್ತಾರೋ ಅತಂಹ ದೇಶ ಸುಬಿಕ್ಷವಾಗಿರುತ್ತದೆ ಎಂದರು.

ಈ ಕಾರ್ಯಕ್ರದಲ್ಲಿ ಭಾಗಿಯಾದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರಾದಾ ಮೋಹನ ಶೆಟ್ಟಿ ಮಾತನಾಡಿ ಇತಂಹ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಹಾಲಕ್ಕಿ ಒಕ್ಕಿಲಿಗರು ಬಹುಸಂಖ್ಯಾತರರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
vlcsnap 2017 11 23 17h58m08s34

RELATED ARTICLES  ಅಲೆಯ ರಭಸಕ್ಕೆ ಕೊಚ್ಚಿಹೋದ 6 ಮಕ್ಕಳ ರಕ್ಷಣೆ.

ಮಾಜಿ ಶಾಸಕರಾದ ದಿನಕರ ಶೆಟ್ಟಿ ಮೆರವಣಿಗೆಯಲ್ಲಿ ಪಾಲ್ಗೊಂಡು ಜನತೆಯ ಹಾಗೂ ವಾದ್ಯ ವೃಂದದ ಜೊತೆ ಕೈಜೋಡಿಸಿದ್ದು ವಿಶೇಷವಾಗಿತ್ತು. ನಂತರನಡೆದ ಸಭಾ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ನಂತರ ಮಾತನಾಡಿದ ಅವರು ನಾನು ನೀಡಿರುವ ಈ ಜಾಗದಲ್ಲಿ ಇತಂಹ ಸಭಾಭವನಗಳು ಆಗುತ್ತಿರುವುದು ನನ್ನ ಪುಣ್ಯ ಎಂದರು.

ಸಸ

ಈ ಕಾರ್ಯಕ್ರಮದಲ್ಲಿ ಅಂಕೊಲಾ ಕಾರವಾರ ಕ್ಷೇತ್ರದ ಶಾಸಕರು ಸತೀಶ ಶೈಲ್ ಮತ್ತು ಹೊನ್ನಾವರ ಭಟ್ಕಳ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯ ಅವರು ಪಾಲ್ಗೊಂಡಿದ್ರು ಮತ್ತು ಅವರು ಮಾತನಾಡಿ ಶಿಕ್ಷಣದ ಮೂಲಕ ಒಕ್ಕಲಿಗ ಸಮುಧಾಯ ವಿಕಾಸಗೊಳ್ಳಬೇಕಾಗಿದೆ ಎಂದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಕೆ,ಟಿ ಗೌಡ, ರಾಜ್ಯ ಒಕ್ಕಲಿಗರ ಸಮುಧಾಯದ ಅಧ್ಯಕ್ಷ ಬೆಟ್ಟೆ ಗೌಡ,ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೊವೀಂದ ಗೌಡ,ಸುಕ್ರೀ ಬೊಮ್ಮ ಗೌಡ,ಗಜಾನನ ಪೈ,ಗಾಯತ್ರಿ ಗೌಡ,ವಿಜಯ ಪಟಗಾರ,ಅನೂಸೂಯ ಅಂಬಿಗ,ಕೃಷ್ಣ ಗೌಡ,ಶ್ರೀಧರ ಗೌಡ ಮುಂತಾದವರು ಉಪಸ್ಥಿತರಿದ್ರು. ಕಾರ್ಯಕ್ರಮದಲ್ಲಿ ಹತ್ತು ಸಾವರಿಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮುಧಾಯದ ಕುಲಬಾಂದವರು ಭಾಗಿಯಾಗಿದ್ರು.