ನವದೆಹಲಿ: ಪದ್ಮಾವತಿ ಚಿತ್ರದ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತಂತೆ ನ.28ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈ ಕುರಿತಂತೆ ವಕೀಲ ಮನೋಹರ ಶರ್ಮಾ ಎನ್ನುವವರು ಸುಪ್ರೀಂ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಚಿತ್ರ ನಿರ್ಮಾಪಕರು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES  ತಲವಾರನಿಂದ ಹಲ್ಲೆ : ಬಿ.ಜೆ.ಪಿ ಜಿಲ್ಲಾ ಯುವ ಮೋರ್ಚಾದ ಸದಸ್ಯನ ಹತ್ಯೆ.

ಈ ಕುರಿತಂತೆ ನ.20ರಂದು ಇದೇ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಚಿತ್ರದ ವಿವಾದದಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು. ಆದರೆ, ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಇಂದು ಮತ್ತೆ ಅರ್ಜಿ ಸಲ್ಲಿಸಿದ್ದು, ನ.28ಕ್ಕೆ ವಿಚಾರಣೆ ನಡೆಯಲಿದೆ.

RELATED ARTICLES  ಖ್ಯಾತ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ.

ಆದರೆ, ಈ ಅರ್ಜಿಯನ್ನು ತೆಗೆದುಕೊಂಡಿರುವ ನ್ಯಾಯಾಲಯ ಸಿಬಿಎಫ್‌ಸಿ ಕೆಲಸದಲ್ಲಿ ನ್ಯಾಯಾಲಯ ತಲೆ ಹಾಕುವುದಿಲ್ಲ ಎಂದಿದೆ.