ಕೇಂದ್ರ ಸರಕಾರವು ಭಾರತೀಯ ಪ್ರಜೆಗಳ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಗಳಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲದ್ದಕ್ಕೂ, ಖಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕೆಂದು ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ನಿಂದ ಈವರೆಗೆ ಯಾವುದೇ ತೀರ್ಪು ಬಂದಿಲ್ಲ. ಅದಾಗ್ಯೂ ಕೆಲವು ಟೆಲಿಕಾಂ ಕಂಪನಿಗಳ ಅಥವ ಬ್ಯಾಂಕ್ ಸಿಬ್ಬಂದಿಗಳು ಎಂದು ಹೇಳಿಕೊಂಡು ಬರುವ ಕರೆಗಳು ನೇರವಾಗಿ ಜನಸಾಮಾನ್ಯರ ಬ್ಯಾಂಕ್ ಖಾತೆಗಳನ್ನು ಗುಡಿಸಿ ಸ್ವಚ್ಚ ಮಾಡುತ್ತಿವೆ. ಇಂತಹದೇ ಪ್ರಕರಣವೊಂದು ಹಾಸನದಲ್ಲಿ ನಡೆದಿದೆ.

ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಹಿಂದಿ ಭಾಷೆಯಲ್ಲಿ ಬಂದ ಕರೆಯನ್ನು ಸ್ವೀಕರಿದ ಹಾಸನದ ಗಣೇಶ್ ಎಂಬ ಯುವಕ ತನ್ನ ಆಧಾರ್ ಕಾರ್ಡ್ ಅನ್ನು ನನ್ನ ಮೊಬೈಲ್ ಹಾಗೂ ಬ್ಯಾಂಕ್ ಖಾತೆಗೆ ಅದಾಗಲೆ ಲಿಂಕ್ ಮಾಡಿಸಿದ್ದೇನೆ ಎಂದು ಹೇಳಿದಾಗ ನಿಮ್ಮ ಆಧಾರ್ ಅನ್ನು ನಿಮ್ಮ ಎಟಿಎಂ ಗೆ ಲಿಂಕ್ ಮಾಡ್ಬೇಕು ಎಂದು ಹೇಳಿದಾಗ, ಅವರ ಆಧಾರ್ ಕಾರ್ಡ್ ನಂಬ್ರಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಅವರಿಗೊಂದು OTP (one time password) ಕಳಿಸಿ ಅದನ್ನು ಕೊಡಲು ಹೇಳಿದಾಗ ಇವರು ಕೊಟ್ಟಿದ್ದಾರೆ. ಇದಾದ ಕೇವಲ 10 ನಿಮಿಷದಲ್ಲಿ ಅವರ ಖಾತೆಯಲ್ಲಿದ್ದ 75 ಸಾವಿರ ರೂಪಾಯಿಗಳನ್ನು ಖದೀಮರು ಆನ್ ಲೈನ್ ಶಾಪಿಂಗ್ ಮಾಡಿ ಮಾಯ ಮಾಡಿದ್ದಾರೆ.

RELATED ARTICLES  10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಾ ಈ ಕಂಪೆನಿ..?

ತಂಗಿಯ ಮದುವೆಗಾಗಿ ಸ್ವಲ್ಪ ಸ್ವಲ್ಪವಾಗಿ ಕೂಡಿಟ್ಟಿದ್ದ ಹಣವು ಹತ್ತೇ ನಿಮಿಷದಲ್ಲಿ ಕಳಕೊಂಡು ಕಂಗಾಲಾಗಿದ್ದಾರೆ. ಹಾಗಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಎಂದು ಬರುವ ಕರೆಗಳ ಬಗ್ಗೆ ಎಚ್ಚರವಿರಲಿ. ಆಧಾರ ಕಾರ್ಡ್ ಲಿಂಕ್ ಮಾಡಲು ಬಯಸುವುದಾದರೆ, ನಿರ್ಧಿಷ್ಟ ಬ್ಯಾಂಕ್, ಟೆಲಿಕಾಂ ಆಫೀಸ್ ಗಳಿಗೆ ಖುದ್ದಾಗಿ ಹೋಗಿ ಈ ಕೆಲಸಗಳನ್ನು ಮಾಡಿಸಬೇಕೆ ವಿನಃ ಫೋನ್ ಮುಖಾಂತರ ಯಾವುದೇ ಕಾರ್ಯ ಮಾಡಬೇಡಿ. ಇಲ್ಲವಾದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ

RELATED ARTICLES  ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ರೋಷನ್ ಬೇಗ್!