ಯಲ್ಲಾಪುರ: ಒಂದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಕೆಲವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಯಲ್ಲಾಪುರದ ನೂತನ ನಗರದಲ್ಲಿ ವರದಿಯಾಗಿದೆ.

ಪಟ್ಟಣದ ನೂತನನಗರ ಮನೆಯೊಂದರ ಯುವಕರ ಜೊತೆ ಸೇರಿಕೊಂಡ ಮಚ್ಚಿಗಲ್ಲಿ ನಿವಾಸಿಗಳಾದ ಕೆಲವು ಹುಡುಗರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನೂತನ ನಗರದದಲ್ಲಿರುವ ಮಹಿಳೆಯರಷ್ಟೇ ಇದ್ಧ ಮನೆಗೆ ನುಗ್ಗಿ ಆವರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡು ಮಹಳೆಯರನ್ನು ಸರ್ಕಾರಿ ಆಸ್ಪತ್ರೆ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಕಾಲೇಜಿನ ಬಳಿಯೇ ಬಾಂಬ್ ಸ್ಫೋಟವಾಗ್ತಿದೆ... ಭಯ ಆಗ್ತಿದೆ : ವಿದ್ಯಾರ್ಥಿನಿ ಸ್ನೇಹಾ ಅಳಲು

ಈ ಕುರಿತು ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಮಹಿಳೆಯರ ಕುಟುಂಬದವರು ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದು, ಪೋಲೀಸರ ಉಪಸ್ಥಿತಿಯಲ್ಲಿ ಸಮಾಜದ ಹಿರಿಯರ ನೇತ್ರತ್ವದಲ್ಲಿ ರಾಜಿ ಸಂಧಾನವಾಗಿದೆ ಎನ್ನಲಾಗಿದೆ.

RELATED ARTICLES  ಇಂದಿನ ಅಡಿಕೆ ಧಾರಣೆಗಳು