ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಜಿ.ಪಿ.ಎಸ್ ಸಾಧನಗಳನ್ನು ಅಳವಡಿಸಿಕೊಂಡು ಮರಳು ಸಾಗಿಸುತ್ತಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನ ಹಾಗೂ ಜಿ.ಪಿ.ಎಸ್ ಸಾಧನಗಳೊಂದಿಗೆ ನವೆಂಬರ್ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ‘ಸರ್ವಿಸ್ ಕ್ಯಾಂಪ್’ಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆದೇಶಿಸಿದೆ.
ನ.24 ರಿಂದ 26 ರವರೆಗೆ ಹೊನ್ನಾವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, 27 ರಿಂದ 29 ರವರೆಗೆ ಕುಮಟಾ ಮಣಕಿ ಮೈದಾನ ಮತ್ತು ಅಂಕೋಲಾ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, ನ. 30 ರಿಂದ ಡಿಸೆಂಬರ್ 2 ರವರೆಗೆ ಕಾರವಾರ ಆರ್.ಟಿ.ಒ ಕಚೇರಿ ಆವರಣದಲ್ಲಿ ಹಾಗೂ ಡಿಸೆಂಬರ್ 3 ಮತ್ತು 4 ರಂದು ಯಲ್ಲಾಪುರ, ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸರ್ವಿಸ ಕ್ಯಾಂಪ್ ನಡೆಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9731076554 ಸಂಪರ್ಕಿಸಲು ಕೋರಲಾಗಿದೆ.