ಯಲ್ಲಾಪುರ : ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೇಸ ಸರ್ಕಾರದ ವೈಫಲ್ಯದಿಂದ, ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ತಿಳಿಸಿದ್ದಾರೆ. ಅವರು ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಸರ್ಕಾರದ ನಕಾರಾತ್ಮಕ ಧೋರಣೆಯಿಂದ ಜನ ಆಡಳಿತದ ವಿರುದ್ಧ ಬೇಸರಗೊಂಡಿದ್ದಾರೆ. ಸಿದ್ದರಾಮಯ್ಯನವರು ಸಮಾಜ ಒಡೆಯುವ ಭರದಲ್ಲಿ ಸರಕಾರಿ ನೌಕರರಲ್ಲಿ ಅಹಿಂಸಾ ಹಾಗೂ ಅಹಿಂದ ಎಂಬ 2 ಭಾಗ ಮಾಡಿ ಪರಸ್ಪರ ಸಮನ್ವಯ ಕೊರತೆಯನ್ನು ಸೃಷ್ಟಿ ಮಾಡಿದ್ದಾರೆ.

RELATED ARTICLES  ಸೈಲ್ ರಿಂದ ಮಾದರಿ ಗ್ರಾಮ ನಿರ್ಮಾಣ ಸಮೀಕ್ಷೆ

ಇದರಿಂದಾಗಿ ಜನರು ಸರಕಾರಿ ಕಛೇರಿಗಳಲ್ಲಿ ನಿತ್ಯ ಅಲೆದಾಡಿ ಕೆಲಸಗಳು ಆಗದೇ ವ್ಯವಸ್ಥೆಯ ವಿರುದ್ಧ ಶಾಪ ಹಾಕುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಇಲ್ಲ ಎಂಬ ಉತ್ತರದಿಂದ ಜನಕ್ಕೆ ಈ ಸರ್ಕಾರ ಸಾಕು ಸಾಕಾಗಿಹೋಗಿದೆ ಎಂದು ಅವರು ಟೀಕಿಸಿದ್ದಾರೆ.

ಅಭಿವೃದ್ಧಿ ಕೆಲಸಗಳು, ಎಲ್ಲ ಹಂತದ ಕೆಲಸಗಳಿಗೆ ಗುತ್ತಿಗೆದಾರರಿಂದ ಮುಂಗಡ ಪರ್ಸಂಟೇಜ್ ನಿಗದಿಪಡಿಸಲಾಗಿದ್ದು ಇದರಿಂದಾಗಿ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗುತ್ತಿವೆ.
ಸ್ಥಳೀಯ ಆಡಳಿತದಲ್ಲಿ ಕೃತಕ ತೊಂದರೆ ಸೃಷ್ಟಿಸಿ ಬ್ರಷ್ಟಾಚಾರ ತಾಂಡವವಾಡುವಂತಾಗಿದೆ.

RELATED ARTICLES  ಸಿದ್ಧಿಗಾಗಿ ಪ್ರಯತ್ನ ಇರಲಿ, ಪ್ರಸಿದ್ಧಿಗಾಗಿ ಅಲ್ಲ: ರಾಘವೇಶ್ವರ ಶ್ರೀ

ಗೋದಾಮುಗಳಲ್ಲಿ ಕೊಳೆತುಹೋದ ಗೋಧಿ ಆಹಾರಧಾನ್ಯಗಳ ಕುರಿತು ಯಾವುದೇ ಕ್ರಮವಾಗಿಲ್ಲ.ಮನೆಗಳ ಹಂಚಿಕೆ ಯೋಜನೆಗಳಲ್ಲಿ ತಾರತಮ್ಯ ಹಾಗೂ ಹಣ ತಾಂಡವವಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ದಕ್ಷ ಒಳ್ಳೆಯ ಹಿರಿಯ ಅಧಿಕಾರಿಗಳು ಜಾಗೃತವಾಗಿ ಹಳ್ಳಿ ಹಾಗೂ ಕೆಳ ಸ್ತರದಲ್ಲಿ ಕ್ಷಿಪ್ರ, ನಿಷ್ಠುರ ಕ್ರಮ ಕೈಗೊಳ್ಳಲು ಒತ್ತಾಯಿಸಿರುವ ಅವರು ಇಲ್ಲವಾದಲ್ಲಿ ಜನರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.