ಕುಮಟಾ : ತಾಲೂಕಿನ ಅಘನಾಶಿನಿ ಹಾಗೂ ತದಡಿಗೆ ಸಂಪರ್ಕ ಕಲ್ಪಿಸಲು ನೂತನ ಬಾರ್ಜ್ ಅನ್ನು ಕ್ಷೇತ್ರದ ಶಾಸಕಿಯಾದ ಶ್ರೀಮತಿ ಶಾರದಾ ಶೆಟ್ಟಿ ಅವರು ಇಂದು ಲೋಕಾರ್ಪಣೆ ಮಾಡಿದರು.

RELATED ARTICLES  ಉತ್ತರಕನ್ನಡ ಜಿಲ್ಲಾ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ : ಗಮನಸೆಳೆದ ಮೆರವಣಿಗೆ : ವಿವಿಧ ವೇಷಭೂಷಣ ತೊಟ್ಟು ಗಮನಸೆಳೆದ ಅಧಿಕಾರಿಗಳು.

ದಶಕಗಳಿಂದ ತದಡಿ ಅಘನಾಶಿನಿಗೆ ಜನರು ಯಾಂತ್ರಿಕ ದೋಣಿಯಲ್ಲೇ ಸಂಚರಿಸುತಿದ್ದು ಇದು ಅಪಾಯದ ಸಂಚಾರವಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಜನಪ್ರತಿನಿಧಿಗಳ ಬಳಿ ಸೇತುವೆಗೆ ಬೇಡಿಕೆ ಇಟ್ಟಿದ್ದರು.

ಮುಂಬರುವ ದಿನಗಳಲ್ಲಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದ ಶಾಸಕಿಯವರು ತಾತ್ಕಾಲಿಕವಾಗಿ ಬಾರ್ಜ್ ಒದಗಿಸಿದ್ದು ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ಹೆಗಡೆಯ ಹೆಣ್ಣುಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇದರ ಸದುಪಯೋಗ ಪಡೆಯುವಂತೆ ಜನತೆಗೆ ವಿನಂತಿಸಿದರು.