ಕುಮಟಾ- ಕುಮಟಾ ತಾಲೂಕಿನಲ್ಲಿ ಸಾರ್ವಜನಿಕರಿಗೆ ಪ್ರಯಾಣಿಸಲು ಸಾರಿಗೆಯ ಬಸ್ಸುಗಳ ಕೊರತೆ ಇತ್ತು. ಹಳ್ಳಿಗಳಿಗೆ ಸಂಚರಿಸಬೇಕಾದ ಬಸ್ಸಗಳು ಹಳೆಯದಾಗಿದ್ದು ಇದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿತ್ತು ಇದನ್ನೆಲ್ಲಾ ಅರಿತ ಸ್ಥಳೀಯ ಶಾಸಕರು ಇಲ್ಲಿಯವರೆಗೆ ತನ್ನ ಅವಧಿಯಲ್ಲಿ ಇಪ್ಪತ್ತು ಬಸ್ಸುಗಳನ್ನು ಕುಮಟಾ ಸಾರಿಗೆ ಘಟಕಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಚಂದಾವರ ಹನುಮ ಮಂದಿರದ ಮೃತ್ತಿಕೆ ಸಂಗ್ರಹಿಸಿದ ಯುವಾ ಬ್ರಿಗೇಡ್ ತಂಡ.

ಅದೇ ರೀತಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ್ ಶೆಟ್ಟಿ ಅವರು ಕುಮಟಾ ಬಸ್ ನಿಲ್ದಾಣದಲ್ಲಿ ನೂತನ ಬಸ್ಸುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.

RELATED ARTICLES  ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಬಳಕೆ ಮಾಡದ ಡಾಟಾ ಇನ್ನು ಮುಂದೆ ವ್ಯರ್ಥವಾಗುವುದಿಲ್ಲ!

ಈ ವೇಳೆ ಸಾರಿಗೆ ಘಟಕದ ವ್ಯವಸ್ಥಾಪಕರು ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗಳು ಅನೇಕ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು..