ಅಹ್ಮದಾಬಾದ್: ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟ ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಹುಲ್ ಕೇವಲ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ. ಆದರೆ ಅವರಿಗೆ ಉತ್ತರ ನೀಡುವುದು ಗೊತ್ತಿಲ್ಲ ಎಂದು ಕುಹಕವಾಡಿದ್ದಾರೆ.

ಈ ಕುರಿತಂತೆ ಇಂದು ಮಾತನಾಡಿರುವ ಅವರು, ರಾಹುಲ್ ಪ್ರಶ್ನೆಗಳನ್ನು ಕೇಳುವುದರಲ್ಲಿ ಅತ್ಯಂತ ನಿಪುಣರು, ಆದರೆ ಉತ್ತರಗಳನ್ನು ನೀಡುವ ದಾರಿಗಳನ್ನು ಅವರು ಕಲಿತಿಲ್ಲ ಎಂದರು.

RELATED ARTICLES  ಈ ದೇಶದ ಪ್ರಭಲವಾದ ಎರಡು ಕೈಗಳು ರಾಮಾಯಣ ಮತ್ತು ಮಹಾಭಾರತವಾಗಿದೆ!

ಉತ್ತರಗಳನ್ನು ನೀಡಲು ಕೇಂದ್ರ ಸರ್ಕಾರ ಎಷ್ಟು ಜವಾಬ್ದಾರಿಯಾಗಿರುತ್ತದೋ, ಪ್ರತಿಪಕ್ಷವೂ ಸಹ ಅಷ್ಟೇ ಜವಾಬ್ದಾರಿಯನ್ನು ಹೊಂದಿರುತ್ತದೆ. ಆದರೆ, ಕಾಂಗ್ರೆಸ ಇದನ್ನು ಅರಿತಿಲ್ಲ. ಬಹುಶಃ, ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಜವಾಬ್ದಾರಿಗಳು ಸರಿಯಾಗಿ ತಿಳಿದಿಲ್ಲ ಎನಿಸುತ್ತದೆ ಎಂದು ತೀಕ್ಷ್ಣವಾಗಿ ಚಾಟಿ ಬೀಸಿದರು.

RELATED ARTICLES  ಸಂಕಷ್ಟ ಪರಿಹಾರದ ನಿರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು?

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬರೆದುಕೊಂಡು ಮಾತನಾಡುವ ಪದ್ದತಿಯನ್ನು ಆ ಪಕ್ಷ ಅನೂಚಾನವಾಗಿ ಪಾಲಿಸುತ್ತಿದೆ ಎಂದು ಕಟಕಿಯಾಡಿದರು.