ಅಂಕೋಲಾ ತಾಲೂಕಿನ ಗೌರಿಕೆರೆ ಬಳಿ ಅಪಘಾತ

IMG 20170603 WA0017

ಕ್ಯಾಂಟರ್ ವಾಹನ ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರನ ಬಲಗಾಲಿಗೆ ತೀವ್ರತರಹದ ಗಾಯವಾದ ಘಟನೆ ಅಂಕೋಲಾ ಸಮೀಪ ನಡೆದಿದೆ. ಗಾಯಾಳುವನ್ನು ಅಂಕೋಲಾದ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಬೈಕ್ ಸವಾರ ಕಾರವಾರದ ಪ್ರಭು ತಂದವೇಲ್ ಕಾಲಿಗೆ ಗಾಯವಾಗಿದೆ.
ಬೈಕ್ ಸಹ ಸವಾರ ಅಂಕೋಲಾದ ಮಂಜುಗುಣಿಯ ರಾಘು ಹರಿಕಂತ್ರಗೆ ಚಿಕ್ಕಪುಟ್ಟ ಗಾಯ
ಮದುವೆ ಮುಗಿಸಿಕೊಂಡು ಮರಳಿ ಕಾರವಾರಕ್ಕೆ ಸ್ನೇಹಿತನಿಗೆ ಬಿಟ್ಟು ಬರಲು ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಅಂಕೋಲಾದ ಗೌರಿಕೆರೆ ಬಳಿ ಎದುರಿಗೆ ಬಂದ ದನವನ್ನು ತಪ್ಪಿಸಲು ಹೋಗಿ ಕ್ಯಾಂಟರ ವಾಹನಕ್ಕೆ ಬೈಕ್ ಡಿಕ್ಕಿ ಸಂಭವಿಸಿದೆ.

RELATED ARTICLES  ಕಾರವಾರದಲ್ಲಿ ಅಮೋನಿಯಂ ನೈಟ್ರೇಟ್ ಸೋರಿಕೆ