ಶಿವಮೊಗ್ಗ : ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್ ಆಗಿದ್ದಾರೆ. ಶಿವಮೊಗ್ಗ ಪೊಲೀಸರು ಕಾರ್ಯಚರಣೆ ನಡೆಸಿ 14 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರನ್ನು ಬಂಧಿಸಿದ್ದಾರೆ.

RELATED ARTICLES  ಈ ಸಂಸ್ಕ್ರತಿ ಕುಂಭ -‌ ಮಲೆನಾಡ ಉತ್ಸವದ ಪ್ರಮುಖ ಉದ್ದೇಶಗಳು

ತಬ್ರೇಜ್, ಕಬೀರ್ ಮತ್ತು ಮುದಾಸೀರ್ ಎಂಬುವರೇ ಬಂಧಿತ ಆರೋಪಿಗಳು. ನಗರದ ಶ್ರೀಮಂತ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಇವರು.ಶಿವಮೊಗ್ಗ, ಹಾಸನ, ಮತ್ತು ಚಿಕ್ಕಮಗಳೂರಿನಲ್ಲೂ ತಮ್ಮ ಕರಾಮತ್ತು ತೋರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ ಬರೋಬ್ಬರಿ 1 ಕೆಜಿ 472 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಮಹಿಳೆಯ ಶವ ನೋಡಲು ಹೋದ ವ್ಯಕ್ತಿಯೂ ಸಾವು : ಭಟ್ಕಳದಲ್ಲಿ ವಿಚಿತ್ರ ಘಟನೆ