ಇತ್ತೀಚೆಗೆ ರಾಜಕೀಯ ಪ್ರಚಾರಕ್ಕಾಗಿ ಸೋಶಿಯಲ್ ಮಿಡಿಯಾಗಳು ತುಂಬಾ ಉಪಯೋಗವಾಗ್ತಿವೆ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಸೋಶಿಯಲ್ ಮಿಡಿಯಾಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಅದು ಕೂಡಾ WhatsApp ಗ್ರುಪ್ ಗಳ ಮೂಲಕ. ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಒಟ್ಟು 7 ಸಾವಿರ WhatsApp ಗ್ರುಪ್ ಗಳನ್ನು ರಚಿಸಿದೆ.
ಇದೇ ಮಾದರಿಯ ಯೋಜನೆ ಉತ್ತರ ಪ್ರದೇಶದಲ್ಲಿ ಮಾಡಿದ್ದ ಬಿಜೆಪಿಗೆ ಒಳ್ಳೆಯ ಪ್ರತಿಫಲ ಸಿಕ್ಕಿತ್ತು. ಅದೇ ಯೋಜನೆಯನ್ನು ಕರ್ನಾಟಕದಲ್ಲಿ ಮಾಡುವ ಸಲುವಾಗಿ 7 ಸಾವಿರ WhatsApp ಗ್ರುಪ್ ಗಳನ್ನು ರಚಿಸಿದ್ದಾರೆ.
ರಚಿಸಿದ ಆ WhatsApp ಗ್ರುಪ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳು, ಮೋದಿಯವರು ಮಾಡಿದ ಭಾಷಣಗಳು ಇನ್ನಿತರ ಮಾಹಿತಿಗಳನ್ನು ಶೇರ್ ಮಾಡಲಾಗುತ್ತಿದೆ. WhatsApp ಗ್ರುಪ್ ಗಳಿಂದ ಜನರಲ್ಲಿ ಜಾಗೃತಿ ಮೂಡಿಸಿ ಸಿದ್ರಾಮಯ್ಯನವರ ಸರ್ಕಾರದ ವೈಫಲ್ಯಗಳನ್ನು ತಿಳಿಸಿಕೊಟ್ಟು ಮುಂದಿನ ಬಾರಿ ಚುನಾವಣೆಯಲ್ಲಿ ಗೆಲ್ಲುವ ಭರವಸೆಯಲ್ಲಿದ್ದಾರೆ.