ಕಾರವಾರ: ಜಾತ್ರೆಯಲ್ಲಿ ನಡೆಯುತ್ತಿದ್ದ ಗುಡುಗುಡಿ ಆಟವನ್ನ ತಡೆಯಲು ಮುಂದಾದ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ ಗೋವೆಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಖಾರ್ಗೆಜೂಗದಲ್ಲಿ ಆಯೋಜಿಸಿದ್ದ ಜಾತ್ರಾಮಹೋತ್ಸವದಲ್ಲಿ ಶಿವಾನಂದ ಹಾಗೂ ಇತರರು ಗುಡುಗುಡಿ ಹಾಕಿರುವುದನ್ನು ವಿರೋಧಿಸಿದಾಗ ಶಿವಾನಂದ ಎಂಬುವವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಆದರೆ ಈತ ಸುತ್ತಮುತ್ತಲಿನಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಗುಡುಗುಡಿಯನ್ನು ಹಾಕಿ ಜನರಿಂದ ಹಣವನ್ನು ದೋಚುವ ಪ್ರವೃತ್ತಿ ಮಾಡುತ್ತಿದ್ದಾನೆ ಎಂದು ದೂರಿದ್ದಾರೆ.

RELATED ARTICLES  ಕರ್ನಾಟಕ ಸಂಘದಿಂದ‌ ವಿನೂತನ ಕಾರ್ಯಕ್ರಮ "ಕಡಲ ತೀರದ ಕನ್ನಡ ಹಬ್ಬ" ಸಂಪನ್ನ

ಜನಪ್ರತಿನಿಧಿಯಾಗಿ ಇದಕ್ಕೆ ತಡೆ ಒಡ್ಡಿದ್ದೆ. ಆದರೆ ಶಿವಾನಂಂದ ಎಂಬುವವರು ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪಿಎಸ್ಐ ಅವರಿಗೆ ಪೋನ್ ಮೂಲಕ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸಿ ನನಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

RELATED ARTICLES  ಪ್ರಸಿದ್ಧ ವೈದ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ.ಎಂ.ಪಿ.ಶೆಟ್ಟಿ ಇನ್ನಿಲ್ಲ.