ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಕೆಳದರ್ಜೆ ಸಹಾಯಕರು, ಅಂಚೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ವಿವರ ಹೀಗಿದೆ:
1. ಹುದ್ದೆ: ಕೆಳದರ್ಜೆ ಸಹಾಯಕರು/ಜೂನಿಯರ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 898
2. ಹುದ್ದೆ: ಪೋಸ್ಟಲ್ / ಸಾರ್ಟಿಂಗ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 2359
3. ಡಾಟಾ ಎಂಟ್ರಿ ಆಪರೇಟರ್ ಒಟ್ಟು ಹುದ್ದೆಗಳ ಸಂಖ್ಯೆ: 02

ವಿದ್ಯಾರ್ಹತೆ: ಕ್ರಮಸಂಖ್ಯೆ 1 ಮತ್ತು 2ರ ಹುದ್ದೆಗಳಿಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕ್ರಮಸಂಖ್ಯೆ 3ರ ಹುದ್ದೆಗಳಿಗೆ ದ್ವಿತೀಯ ಪಿಯುಸಿ (ಸೈನ್ಸ್ ವಿಷಯದಲ್ಲಿ) ಯಲ್ಲಿ ತೇರ್ಗಡೆಯಾಗಿರಬೇಕು.

RELATED ARTICLES  ಚುನಾವಣೆಗೆ ಮುಹೂರ್ತ ಫಿಕ್ಸ್.

ವಿದ್ಯಾರ್ಹತೆ: 01.08.2018ರಂತೆ 18-27 ವರ್ಷ ವಯೋಮಿತಿಯಲ್ಲಿರಬೇಕು ಅಂದರೆ ಅಭ್ಯರ್ಥಿ 02.08.1991 ರಿಂದ 01.08.2000ರ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಆರ್ಹರು. ಇದೇ ವೇಳೇ ಎಸ್ಸಿ/ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗುವುದು.

ವೇತನಶ್ರೇಣಿ: ರೂ. 5200-20,200/-

ಹುದ್ದೆಗೆ ಆಯ್ಕೆ ಮಾಡುವ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 04.03.2018 ರಿಂದ 28.03.2018ರವರೆಗೆ ನಡೆಸಲಾಗುವುದು. ಇದು ಒಟ್ಟು 200 ಅಂಕಗಳ ಪರೀಕ್ಷೆಯಾಗಿದ್ದು ಋಣಾತ್ಮಕ ಮೌಲ್ಯಮಾಪನ ಒಳಗೊಂಡಿರುತ್ತದೆ.

RELATED ARTICLES  ಭಟ್ಕಳದಲ್ಲಿ ವಿಪ್ರೋ ಕ್ಯಾಂಪಸ್ ಸಂದರ್ಶನ

ಪರೀಕ್ಷಾ ಕೇಂದ್ರಗಳು ಹೀಗಿವೆ: ಬೆಂಗಳೂರು, ಧಾರವಾಡ, ಗುಲ್ಬರ್ಗಾ, ಮಂಗಳೂರು, ಮೈಸೂರು

ಅರ್ಜಿ ಶುಲ್ಕ: ರೂ.100 (ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ನಿಗದಿತ ಮೊತ್ತದ ಶುಲ್ಕವನ್ನು ಎಸ್.ಬಿ.ಐ ನೆಟ್ ಬ್ಯಾಂಕಿಂಗ್/ಎಸ್.ಬಿ.ಐ ಚಲನ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಮೂಲಕ ಆನ್ ಲೈನ್ ಮಾರ್ಗದಲ್ಲಿ ಪಾವತಿಸಬಹುದು.

ಅರ್ಜಿ ಸಲ್ಲಿಕೆ: ಆನ್ ಲೈನ್ ಮಾರ್ಗವಾಗಿ ಮಾತ್ರ 18.11.2017 ರಿಂದ 18.12.2018ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

http://www.ssconline.nic.in/