ಕುಮಟ ತಾಲೂಕಿನ ಕೋಡಕಣಿ ಗ್ರಾಮದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಟ್ಟಿಸಿದ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣವನ್ನು ಒಡೆದು ಹಾಕಿದ್ದು ಯಾರ ಅನುಕೂಲಕ್ಕೂ ಬಾರದೇ ಇರುವಂತೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಆ ಬಸ್ ನಿಲ್ದಾಣ ದ ಜಾಗದಲ್ಲಿ ಅಂಗಡಿ ಕಟ್ಟುವ ಕಾಮಗಾರಿ ಪ್ರಗತಿಯಲ್ಲಿತ್ತು.ಆದರೆ ಆ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಿರುವುದು ಯಾವ ಕಾರಣಕ್ಕಾಗಿ ಎಂದು ತಿಳಿದು ಬಂದಿಲ್ಲ.ಇದನ್ನು ಒಡೆದು ಬಸ್ ನಿಲ್ದಾಣವು ಇಲ್ಲ ಅಂಗಡಿಯು ಇಲ್ಲದೇ ಹಾಗೇ ಹಾಳು ಮನೆಯಂತಾಗಿದೆ.
ಮೂರು ವರ್ಷದ ಹಿಂದೆ ಈ ಕಾಮಗಾರಿ ಪ್ರಾರಂಭ ಮಾಡಿದ್ದು ಇನ್ನು ವರೆಗೂ ಮುಗಿದಿಲ್ಲ,ಪಂಚಾಯತ ಈ ಜಾಗದಲ್ಲಿ ಆದಷ್ಟು ಬೇಗ ಜನರಿಗೆ ಉಪಕಾರವಾಗುವಂತೆ ಗ್ರಂತಾಲಯದ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆಯನ್ನು ಯನ್ನು ಮಾಡಿಕೊಟ್ಟರೆ ಉಪಕಾರವಾಗಬಹುದೆಂಬುದು ಊರ ಜನರ ಮಾತಾಗಿದೆ.
ಆದಷ್ಟು ಬೇಗ ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು ಈ ಕಾಮಗಾರಿ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಿಕೊಡಬೇಕಾಗಿದೆ.