ಯಲ್ಲಾಪುರ : ಪಟ್ಟಣ ವ್ಯಾಪ್ತಿಯ ಐಬಿ ರಸ್ತೆಯಲ್ಲಿರುವ ಮಕ್ಕಳ ಉದ್ಯಾನವನದ ಹೊರ ಭಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಕುಡಿದು ಬಿಸಾಡಿದ ಕೊಟ್ಟೆಗಳು ಹಾಗೂ ಸಾರಾಯಿ ಬಾಟಲಿಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಪ್ರತಿದಿನ ರಾತ್ರಿ ಸುಮಾರು ಹತ್ತಕ್ಕೂ ಹೆಚ್ಚು ಜನ ಇಲ್ಲಿ ಕಾರು ಹಾಗೂ ಬೈಕ್ ಗಳ ಮೂಲಕ ಕತ್ತಲೆಯಲ್ಲಿ ಕುಳಿತು ಮದ್ಯವನ್ನು ಕುಡಿಯುತ್ತಿದ್ದು ನಂತರ ಬಾಟಲಿಗಳನ್ನು ಅಲ್ಲೆ ಬಿಟ್ಟು ಹೋಗುತ್ತಿದ್ದಾರೆ ಎನ್ನಲಾಗಿದೆ.
ಅನೇಕ ಸ್ವಯಂ ಸೇವಾ ಸಂಸ್ಥೆಗಳು ಪಾರ್ಕಿನ ಒಳಗೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದಿದೆ, ಕೆಲವು ಸಂಘಟನೆಗಳು ಸ್ವಚ್ಛತೆ ಹೆಸರಿನಲ್ಲಿ ಪಾರ್ಕಿನ ಒಳಗಿರುವ ಕಸವನ್ನು ಎತ್ತಿ ಪರ್ಕಿನ್ ಹೊರಗಿರುವ ಕಾಂಪೌಂಡ್ ಪಕ್ಕದ ರಸ್ತೆಯ ಮೇಲೆ ಎಸೆದಿರುವ ಉದಾಹರಣೆಯೂ ಇದೆ. ಈ ಕಸದಲ್ಲಿ ಕುಡಿದು ಬಿಸಾಡಿದ ಬಾಟಲಿ ಗಾಜುಗಳು, ಸಾರಾಯಿ ಸ್ಯಾಚೆಟುಗಳು ಸೇರಿ ರಸ್ತೆಯ್ ಆನಂದವನ್ನು ಹಾಳುಗೆಡವಿದೆ.
ಇದೇ ಮಾರ್ಗವಾಗಿ ಸಂಚರಿಸುವ ಪಟ್ಟಣ ಪಂಚಾಯಿತಿ ಕಸ ಸಂಗ್ರಹಕರು ಕೂಡ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪಾರ್ಕಿನ ಹೊರಗಡೆ ಕೂಡ ಸುಂದರವಾದ ಸ್ಥಳವಿದ್ದು ಅನೇಕ ಜನ ಇಲ್ಲಿ ಬೆಳಗ್ಗಿನ ವಾಯು ವಿಹಾರ ಮಾಡುತ್ತಾರೆ. ಒಡೆದ ಬಾಟಲಿಗಳು ಹಾಗೂ ಅಲ್ಲಿ ಇಲ್ಲಿ ಬಿದ್ದಿರುವ ಗಾಜುಗಳು ಮತ್ತು ಸಾರಾಯಿ ಸ್ಯಾಚೆಟಗಳು, ತಿಂಡಿ ತಿನಿಸು ತಿಂದಿರುವ ಕ್ಯಾರಿ ಬ್ಯಾಗುಗಳು, ಪತ್ರಿಕೆಯ ಹಾಳೆಗಳು ಸೇರಿದಂತೆ ಇನ್ನು ಕೆಲವು ಹೆಸರಿಸಲಾಗದ ವಸ್ತುಗಳು ಕಾಣ ಸಿಗುತ್ತವೆ.