ಕುಮಟಾ :ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಉತ್ತರ ಕನ್ನಡ ತಾಲೂಕಾ ಯುವ ಒಕ್ಕೂಟ ಹಾಗೂ ಸ್ಪೂರ್ತಿ ಸಾಂಸ್ಕ್ರತಿಕ ಕಲಾ ಬಳಗ, ಮಿರ್ಜಾನ ಕುಮಟಾ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯವಜನೋತ್ಸವ ಕಾರ್ಯಕ್ರಮ ಕುಮಟಾ ತಾಲೂಕಿನ ನೆಲ್ಲಿಕೇರಿ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದ ಮೋಹನ ಶೆಟ್ಟಿ ದೀಪ ಬೆಳಗಿಸುವ ಮೂಲಕ ನೆರವರಿಸಿದರು.ನಂತರ ಅವರು ಮಾತನಾಡಿ ಈ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಜಾನಪದ ಉಳಿಸಿ ಬೆಳಸುವಂತ ಈ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದು ಸಂತೋಷವಾಗುತ್ತಿದೆ. ಇಂದಿನ ದಿನಗಳಲ್ಲಿ ಹಿಂದಿನ ಸಂಪ್ರಾದಾಯಗಳು ಮತ್ತು ಜನಪದ ಕಲೆಗಳು ಮರೆಯಾಗುತ್ತಿದೆ. ಆದ್ದರಿಂದ ಇತಂಹ ಕಲೆಯನ್ನು ಉಳಿಸಿ ಬೆಳಸಬೇಕು ಎನ್ನುವ ಉದ್ದೇಶದಿಂದ ಸರಕಾರ ಈ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ಥವಿಕ ಮಾತನಾಡಿದ ಸೂರಜ ನಾಯ್ಕ ಯುವಜನೋತ್ಸವ ಮತ್ತು ಯುವಜನ ಮೇಳದ ಮಧ್ಯೆ ಇರುವ ವೈತ್ಯಾಸವೇನು, ಮತ್ತು ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿಧರ ಬಗ್ಗೆ , ಜೊತೆಗೆ ಯುವಜನೋತ್ಸವ ಯಾವ ಯಾವ ಹಂತದಲ್ಲಿ ನಡೆಯುತ್ತದೆ ಎನ್ನವುದರ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ಮಾತನಾಡಿ ಕ್ರೀಡೆಗೆ ನೀಡಿದತಂಹ ಪ್ರೋತ್ಸಾಹವನ್ನು ಜಾನಪದ ಕೆಲೆಯತಂಹ ಸಾಂಸ್ಕ್ರತಿಕ ಕಲೆಗಳಿಗೆ ಸರಕಾರ ನೀಡದೆ ಇರುವುದು ವಿಷಾದನಿಯವಾಗಿದೆ. ಹಿಂದಿನ ಪೀಳಿಗೆಯವರು ಅತ್ಯಂತ ಶ್ರೀಮಂತವಾದ ಕಲೆಯನ್ನು ನಮಗೆ ಬಿಟ್ಟುಹೋಗಿದ್ದಾರೆ ಅತಂಹ ಕಲೆಯನ್ನು ಮುಂದಿನ ಪಿಳಿಗೆಗೆ ಕೊಂಡೊಯ್ಯುವುದಕ್ಕೆ ಇತಂಹ ಯುವಜನೋತ್ಸವ ಕಾರ್ಯಕ್ರಮದ ಸಹಕಾರಿಯಾಗಿದೆ ಎಂದರು..
ಈ ಕಾರ್ಯಕ್ರಮದಲ್ಲಿ ಕುಮಟಾದ ದಯಾ ನಿಲಯ ವಿಶೇಷ ಚೇತನರ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧಿಸಿದ ಸಾಧನೆ ಗುರುತಿಸಿ ಗಣ್ಯರಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಕುಮಟಾ ವಿಜಯ ಪಟಗಾರ,ರತ್ನಾಕರ ನಾಯ್ಕ,ವೀಣಾ ಸೂರಜ ನಾಯ್ಕ,ರಾಜೇಶ ನಾಯ್ಕ,ಗೀತಾ ಮುಕ್ರಿ,ಮಹೇಶ ಕುರಿವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..