ಕುಮಟಾ: ಚಂಪಾಷಷ್ಠಿ ಜಾತ್ರೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಶ್ರೀ ಯುವಶಕ್ತಿ ಯುವಕಸಂಘ, ಬಂಕಿಕೊಡ್ಲ ಇವರ ಆಶ್ರಯದಲ್ಲಿ ಬಂಕಿಕೊಡ್ಲದ ಆಸ್ಪತ್ರೆಯ ಆವರಣದಲ್ಲಿ ಅದ್ಧೂರಿಯಾಗಿ ಜರುಗಿತು. ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಚಂಪಾಷಷ್ಠಿಯು ಈ ಭಾಗದಲ್ಲಿ ನಡೆಯುವ ಒಂದು ಜಾತ್ರೆ ಹಾಗೂ ದೈವಾರಾಧನೆಯ ವಿಶೇಷ ದಿನವಾಗಿದ್ದು ಯುವಶಕ್ತಿ ಯುವಕಸಂಘವು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನಾರ್ಹ. ಇಂತಹ ಆಚರಣೆಯನ್ನು ಹಲವು ವರ್ಷಗಳಿಂದ ಆಚರಿಸುತ್ತಿದ್ದು ಬಾಲ್ಯದಲ್ಲಿದ್ದಾಗ ಈ ಜಾತ್ರೆಗೆ ಷಷ್ಠಿ ತೇರು ಎಂದು ಕರೆಯುತ್ತಿದ್ದೆವು. ಈ ಸಂದರ್ಭದಲ್ಲಿ ಸ್ಥಳೀಯರಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು ಈ ಭಾಗದಲ್ಲಿ ಬೆಳೆಯುವ ಕಂಚೀಕಾಯಿ ವಿಶೇಷವಾಗಿತ್ತು. ಆದರೆ ಇವಲ್ಲ ಈಗ ಕಣ್ಮರೆಯಾದದ್ದು ವಿಷಾದನೀಯ. ಇಂತಹ ಕಾರ್ಯಕ್ರಮಗಳ ಜೊತೆಗೆ ಜಾನಪದ ಗೀತೆ, ಗುಮಟೆ ಪಾಂಗ್, ಯಕ್ಷಗಾನ ಮುಂತಾದ ಹಳೆಯ ಆಚರಣೆಗಳನ್ನು ಆಚರಿಸಿ, ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.

RELATED ARTICLES  ಐದು ದಿನಗಳ ಕಾಲ ಮಳೆ ಸಂಭವ : ಇಲಾಖೆ ಮಾಹಿತಿ

ಅಲ್ಲದೇ ಕಳೆದ 50 ವರ್ಷಗಳಿಂದ ಇದುವೆರಗೂ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಗೋಕರ್ಣ ಗ್ರಾ.ಪಂ., ಹನೇಹಳ್ಳಿ ಗ್ರಾ. ಪಂ., ತೊರ್ಕೆ ಗ್ರಾ. ಪಂ., ನಾಡುಮಾಸ್ಕೇರಿ ಗ್ರಾ. ಪಂ. ಇವುಗಳನ್ನೆಲ್ಲ ಒಗ್ಗೂಡಿಸಿ ಗೋಕರ್ಣ ಪ್ರಾಧಿಕಾರ ರಚನೆಯಾದಲ್ಲಿ ಈ ಭಾಗದ ಸಂಪೂರ್ಣ ಅಭಿವೃದ್ಧಿ ಸಾಧ್ಯವಿದೆ. ಇದಕ್ಕಾಗಿ ನಾವೆಲ್ಲ ಸಂಘಟಿತರಾಗಿ ಹೋರಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಿನಕರ ಶೆಟ್ಟಿಯವರು ಮಾತನಾಡಿ ಈ ಭಾಗದ ಅಭಿವೃದ್ಧಿಯಾಗಿಲ್ಲ ಎನ್ನುವುದಕ್ಕೆ ನನ್ನ ಸಹಮತವಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಭಾಗದ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿದಲ್ಲಿ ಈ ಭಾಗದ ಅಭಿವೃದ್ಧಿ ಪ್ರಾಧಿಕಾರವನ್ನು ಅಥವಾ ಪಟ್ಟಣ ಪಂಚಾಯತಿಯನ್ನು ರಚಿಸಿ ಈ ಭಾಗದ ಸಂಪೂರ್ಣ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಬಿಜೆಪಿ ಪಕ್ಷದ ಮೇಲೆ ಇದ್ದು ಕೇಂದ್ರದ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪನವರ ಕೈ ಬಲಪಡಿಸೋಣ, ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು.

RELATED ARTICLES  ಉತ್ತರಕನ್ನಡದ ಕೊರೋನಾ ವರದಿ : ಮತ್ತೆ ಏರುತ್ತಿದೆ ಪ್ರಕರಣ

ಈ ಸಂದರ್ಭದಲ್ಲಿ ಶ್ರೀಮತಿ ಗಣಪು ಸೋಮು ಗೌಡ, ರಾಮಚಂದ್ರ ತಿಪ್ಪು ಗೌಡ ಇವರುಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಂಜುನಾಥ ಜನ್ನು, ಬೀರಣ್ಣ ಮಾಸ್ತರ, ಮನೋಹರ್ ಡಿ. ಗೌಡ, ಶ್ರೀನಿವಾಸ ಡಿ. ನಾಯಕ, ಸಂಘದ ಅಧ್ಯಕ್ಷ ರಾಜೇಂದ್ರ ಸಿ. ಗೌಡ, ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.