Beef-Fest ಎಂಬ ಶಬ್ದ ತಂದ ಅಶುದ್ಧಿಯನ್ನು ಹೊಗಲಾಡಿಸಲು ಶೀಘ್ರಾತಿಶೀಘ್ರದಲ್ಲಿ #MilkFest #ಹಾಲು_ಹಬ್ಬ ಆಯೋಜಿಸೋಣವೇ? ಎಂಬ ರಾಘವೇಶ್ವರ ಶ್ರೀಗಳ ಸಂಕಲ್ಪಕ್ಕೆ ಯೋಜನೆ ಸಿದ್ಧವಾಗಿದ್ದು ದಿನಾಂಕ 11-06-2017 ರಂದು ಹಾಲು ಹಬ್ಬ ಆಚರಿಸಲು ಸಿದ್ಧತೆ ನಡೆದಿದೆ.

ಗೋವಿನ ಕುರಿತಾಗಿ ಜಾಗ್ರತಿ ಹಾಗೂ ಹಾಲಿನ ಮಹತ್ವವನ್ನು ತಿಳಿಸುವ ಮೂಲಕ ಜನ ಜಾಗ್ರತಿಗೆ ಪ್ರಯತ್ನಗಳು ಪ್ರಾರಂಭವಾಗಿವೆ.

RELATED ARTICLES  ಓರ್ವ ಭಾರತೀಯ ಸೇರಿ ಮೂವರನ್ನು ಹತ್ಯೆ ಮಾಡಿದ ಪ್ರತ್ಯೇಕತಾವಾದಿಗಳು!

ಗೋ ಸಂಬಂಧಿಸಿದ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಮಠ ಹಾಗೂ ಕಾರ್ಯಕರ್ತರು ಹಾಲು ಹಬ್ಬಕ್ಕೆ ಉತ್ಸುಕರಾಗಿದ್ದಾರೆ.

ಗೋವಿನ ಜೀವಕ್ಕೆ ನೆರವಾದ ಮಠ ಈಗ ಗೋವನ್ಮು ಜನ ಮಾನಸಕ್ಕೆ ಹೊಂದಿಸುವತ್ತ ಮತ್ತೆ ಮುಂದಡಿ ಇಟ್ಟಿದೆ. ಹಾಲಿನ ಮಹತ್ವ ಹಾಗೂ ಗೋವಿನ ಮಹತ್ವ ಸಾರಲು ಈ ಹಾಲು ಹಬ್ಬ ಉತ್ತಮ ವೇದಿಕೆಯಾಗಲಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಸಹಕರಿಸುವಂತೆ ವಿನಂತಿಸಲಾಗಿದೆ.

RELATED ARTICLES  ಪಾಕ್ ಗುಂಡಿನ ದಾಳಿಗೆ ಓರ್ವ ಬಾಲಕ ಬಲಿ!