ಅಮೆರಿಕ ಟೆಕ್ ಉದ್ಯಮದ ಅಗ್ರಗಣ್ಯ ಸಂಸ್ಥೆ ಆಪಲ್ ಬೆಡ್ಡಿಟ್ ಎಂಬ ಸ್ಲೀಪ್ ಮಾನಿಟರ್ (ನಿದ್ರಾ ಮಾಪಕ) ಸಾಧನ ಹಾಗೂ ಆಪ್ ನ್ನು ಖರೀದಿಸಿದೆ.

ಖರೀದಿಯ ಮೊತ್ತ ಹಾಗೂ ಇನ್ನಿತರ ವಿವರಗಳು ಇನ್ನಷ್ಟೇ ಮಾಧ್ಯಮಗಳಿಗೆ ಸಿಗಬೇಕಿದೆ. ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಹೀಗೆ ಇನ್ನೂ ಅನೇಕ ಸಮಸ್ಯೆಗಳಿಂದಾಗಿ ಹಲವು ಜನರಿಗೆ ನಿದ್ರೆ ಬಾರದಂತಾಗಿರುವ ಪರಿಸ್ಥಿತಿ ಉಂಟಾಗಿದ್ದು, ನಿದ್ರೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಸ್ಲೀಪ್ ಮಾನಿಟರ್ ನಿದ್ರಾ ಮಾಪಕ ಸಾಧನವನ್ನು ತಯಾರಿಸಲಾಗಿತ್ತು.

RELATED ARTICLES  ಆಟೋಗೆ ಡಿಕ್ಕಿಯಾದ ಕಾರು : 11 ವರ್ಷದ ಬಾಲಕ ಸಾವು

ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ (Helsinki) ವಿಶ್ವವಿದ್ಯಾಲಯದ ತಂತ್ರಜ್ಞರ ತಂಡ 2007 ರಲ್ಲಿ ಕಂಡು ಹಿಡಿದಿದ್ದ ‘ಬೆಡ್ಡಿಟ್’(Beddit) ಸಾಧನ ಹಾಗೂ ಆಪ್ ನ್ನು ಆಪಲ್ ಸಂಸ್ಥೆ ಖರೀದಿಸಿದೆ. ಬೆಡ್ಡಿಟ್ ಆಪ್ ವ್ಯಕ್ತಿಯ ನಿದ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ನಿಖರವಾಗಿ ಮೊಬೈಲ್‌ ನಲ್ಲಿರುವ ಆ್ಯಪ್‌ಗೆ ರವಾನಿಸುತ್ತದೆ. ಆ ಮಾಹಿತಿಗಳಿಗೆ ಅನುಗುಣವಾಗಿ ನಮ್ಮ ದೈನಂದಿನ ನಿದ್ರೆಯ ಪ್ರಮಾಣ ತಿಳಿಯುತ್ತದೆ. ಅಷ್ಟೇ ಅಲ್ಲದೇ ನಿದ್ರೆಗೆ ಬೇಕಾದ ಅಗತ್ಯ ಸಲಹೆ, ಸೂಚನೆಗಳನ್ನು ಈ ಆ್ಯಪ್ ನೀಡುತ್ತದೆ.

RELATED ARTICLES  ಉತ್ತರಕನ್ನಡದ ಹೆಮ್ಮೆಯ ಫೋಟೋಗ್ರಾಫರ್ ಗೋಪಿ ಜಾಲಿ

ಬೆಡ್ಡಿಟ್ ನ ವೆಬ್ ಸೈಟ್ ನಲ್ಲಿ ಈ ಸಾಧನವನ್ನು ಆಪಲ್ ಸಂಸ್ಥೆ ಖರೀದಿಸಿದೆ ಎಂಬ ಮಾಹಿತಿ ಅಪ್ ಡೇಟ್ ಆಗಿದ್ದು, ಬೆಡ್ಡಿಟ್ ಆಪ್ ನಲ್ಲಿರುವ ಮಾಹಿತಿಯನ್ನು ಆಪಲ್ ನ ಹೆಲ್ತ್ ಆಪ್ ನಲ್ಲಿಯೂ ಹಂಚಿಕೆ ಮಾಡಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ