ನ್ಯೂಯಾರ್ಕ್: ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಸಹ ಆಕಳಿಕೆ ಬರುತ್ತದೆ. ಇದರ ಹಿಂದಿನ ಕಾರಣವನ್ನು ಸಂಶೋಧಕರು ಕಂಡುಹಿಡಿದಿದ್ದು, ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್ ರಿಫೆಕ್ಸಸ್ ನಿಂದ ಈ ರೀತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಬೇರೊಬ್ಬರು ಆಕಳಿಸುತ್ತಿರುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದು ಎಕೋಫೆನೊಮೆನ ಸಾಮಾನ್ಯ ರೂಪವಾಗಿದ್ದು, ಸಹಜವಾಗಿಯೆ ಬರುವ ಅನುಕರಣೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆಕಳಿಕೆಯನ್ನು ತಡೆದಷ್ಟೂ ಹೆಚ್ಚಾಗುತ್ತದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕ ಜಾಕ್ಸನ್ ಹೇಳಿದ್ದಾರೆ.
ಈ ಸಂಶೋಧನೆ ನರವ್ಯೂಹದ ಅಸ್ವಸ್ಥತೆಗಳು ಹೆಚ್ಚುವುದಕ್ಕೆ ಸಂಬಂಧಿಸಿದ ಅಧ್ಯಯನಕ್ಕೂ ಪೂರಕವಾಗಿರಲಿದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದು ಅಧ್ಯಯನ ವರದಿ ಕರೆಂಟ್ ಬಯಾಲಜಿ ಎಂಬ ಜರ್ನಲ್ ನಲ್ಲಿ ಪ್ರಕಟಗೊಂಡಿದೆ.