ಕುಮಟಾ: ರಾಜ್ಯದ ಶಾಲಾ ಬಾಲಕಿಯ ಹೊಸ ಆಲೋಚನೆಗೆ ಪ್ರಧಾನಿ ಮೋದಿ ಅವರೇ ತಲೆದೂಗಿದ್ದಾರೆ. ಇಂತಹದೊಂದು ವಿಶೇಷ ಸಾಧನೆಯನ್ನು ಬಿಜಿಎಸ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕೀರ್ತಿ ಹೆಗಡೆ ಮಾಡಿದ್ದಾರೆ. ಮೋದಿ ಅವರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಕೀರ್ತಿ ಹೆಗಡೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಮಗಳ ಹೆಸರನ್ನು ಉಲ್ಲೇಖಿಸಿರುವುದ್ದಕ್ಕೆ ಪೋಷಕರಾದ ಗಜಾನನ ಹೆಗಡೆ-ಉಮಾ ಸಂತಸ ವ್ಯಕ್ತಪಡಿಸಿದರು. ಎಷ್ಟೋ ವಿದ್ಯಾರ್ಥಿಗಳಿಗೆ ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಕೇಳುವುದು, ಓದುವುದು, ಬರೆಯುವುದು ಅಷ್ಟಾಗಿ ಇಷ್ಟವಾಗಲ್ಲ. ಪರಿಸರದ ಮಧ್ಯೆ ಕುಳಿತು ಓದಿದರೆ ವಿಷಯವನ್ನು ಪ್ರಾಯೋಗಿಕವಾಗಿ ಕಲಿಯಬಹುದು, ಪ್ರಕೃತಿಯನ್ನು ಅರಿಯಬಹುದು. ಇದರ ಜತೆ ಟೆಕ್ನಾಲಜಿಯನ್ನು ಸೇರಿಸಿದರೆ ಕಲಿಕೆ ಇನ್ನಷ್ಟು ಆಸಕ್ತಿದಾಯಕವಾಗುತ್ತದೆ.

RELATED ARTICLES  ಭಟ್ಕಳ ಸಮೀಪ ಉರುಳಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲಕಾಲ ಭೀತಿಗೊಂಡ ಜನತೆ

ಆಗ ಎಲ್ಲರೂ ಕಲಿಕೆಯನ್ನು ಇಷ್ಟಪಡುತ್ತಾರೆ, ಪರಿಸರದ ಬಗ್ಗೆಯೂ ಜಾಗೃತಿ ಮೂಡುತ್ತದೆ. ಜತೆಗೆ ದೇಶವೂ ಅಭಿವೃದ್ಧಿಯಾಗುತ್ತದೆ ಎಂಬ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಪತ್ರದ ಮೂಲಕ ಕೀರ್ತಿ ಹೆಗಡೆ ಹಂಚಿಕೊಂಡಿದ್ದಳು. ವಿದ್ಯಾರ್ಥಿನಿಯ ಆಲೋಚನೆಯನ್ನು ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿ ಅಭಿನಂದಿಸಿದ್ದಾರೆ. ಕುಮುಟಾ ತಾಲೂಕಿನ ಕೀರ್ತಿ ಹೆಗಡೆ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES  ಪರೇಶ್ ಮೇಸ್ತಾ ನಿಘೂಡ ಸಾವಿನ ಆರೋಪಿ ಸಲೀಂ ಶೇಖ್ ಪೋಲೀಸ್ ಬಲೆಗೆ!