ಕುಮಟಾ: ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವಯವರ `ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಅವರು ತಮಗೆ ಒಲವಿನ ಓಲೆ ಬರೆದ ಕುಮಟಾದ ಕೀರ್ತಿ ಹೆಗಡೆ ಯವರ ಕಾಳಜಿ ಹಾಗೂ ಸಲಹೆಯ ಬಗ್ಗೆ ಹೆಮ್ಮೆ ಪಟ್ಟರು. ಕೀರ್ತಿ ಹೆಗಡೆ ಮಿರ್ಜಾನಿನ ಗಜಾನನ ಹೆಗಡೆ ಮತ್ತು ಉಮಾ ಹೆಗಡೆ ದಂಪತಿಗಳ ಮಗಳಾಗಿದ್ದು ಮಿರ್ಜಾನಿನ ಬಿ.ಜಿ.ಎಸ್. ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಜಯ ಕರ್ನಾಟಕ ಪತ್ರಿಕೆ ಪ್ರಕಟಿಸಿದ `ಮೋದಿಗೆ ಮಕ್ಕಳ ಒಲವಿನ ಓಲೆ’ ಎಂಬ ಶೀರ್ಷಿಕೆಯಡಿಯಲ್ಲಿ ಕೀರ್ತಿ ಹೆಗಡೆ ಡಿಜಿಟಲ್ ಇಂಡಿಯಾ ಮತ್ತು ಸ್ಮಾರ್ಟ ಸಿಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡಾ ಮಾರ್ಪಾಡಿನ ಅವಶ್ಯಕತೆ ಇದ್ದು ಪ್ರಕೃತಿಯ ಜೊತೆಗಿನ ಕಲಿಕೆ ಇಂದಿನ ಮಕ್ಕಳ ಆದ್ಯತೆಯಾಗಿದ್ದು ಈ ರೀತಿಯಾದಲ್ಲಿ ಪ್ರಕೃತಿಯ ಬಗ್ಗೆ ಅರಿವು ಮೂಡಿ ಬಹುಶಃ ಅವರು ಪ್ರಕೃತಿಯನ್ನು ಕಾಪಾಡುವಲ್ಲಿ ನೆರವಾಗಬಹುದು ಎಂಬ ಸಲಹೆಯನ್ನು ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿಯವರು ಹೃದಯ ತುಂಬಿ ಮೆಚ್ಚುಗೆಯ ನುಡಿಗಳನ್ನಾಡಿದರು.

RELATED ARTICLES  ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದ ಪುಟಾಣಿ ಸಿಂಚನಾ ಭಟ್ಟ

ಅಲ್ಲದೇ ಒಲವಿನ ಓಲೆಯ ಮೂಲಕ ದೇಶದ ಪ್ರಧಾನಿಯನ್ನು ಮಕ್ಕಳೊಂದಿಗೆ ಬೆಸೆಯುವ ಕಾರ್ಯ ಮಾಡಿದ ವಿಜಯ ಕರ್ನಾಟಕದ ವಿನೂತನ ಪ್ರಯತ್ನಕ್ಕೆ ಮೋದಿಯವರು ಶಹಬ್ಬಾಶ್ ಹೇಳಿದ್ದು ಪತ್ರಿಕೆಗೆ ನೇರ ಪತ್ರ ಬರೆಯುವ ಮೂಲಕ ಅವರನ್ನು ಅಭಿನಂದಿಸಿದ್ದಾರೆ. ಮೋದಿಯವರಿಂದ ಶ್ಲಾಘನೆಗೆ ಒಳಪಟ್ಟು ಜಿಲ್ಲೆ ಹಾಗೂ ತಾಲೂಕಿಗೆ ಹೆಮ್ಮೆ ಹಾಗೂ ಕೀರ್ತಿ ತಂದ ಕೀರ್ತಿ ಹೆಗಡೆ ಇವರನ್ನು ಕುಮಟಾದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಬಿ.ಜಿ.ಎಸ್. ಶಾಲೆಗೇ ತೆರಳಿ ವಿದ್ಯಾರ್ಥಿನಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಪೋತ್ಸಾಹಿಸಿದರು.

RELATED ARTICLES  ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಐ ಹೆಗಡೆ ಹಾಗೂ ವಿನಾಯಕ ನಾಯ್ಕ ಆಯ್ಕೆ