ಹೊನ್ನಾವರ :ಬಳ್ಕೂರು ವಿಎಸ್‍ಎಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷಗಾದಿ ಕುತೂಹಲಕ್ಕೆ ತೆರೆಬಿದ್ದಿದೆ. ಹೌದು, ಅಧ್ಯಕ್ಷರಾಗಿ ಶಂಭು ಬೈಲಾರ , ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಬಿಟಿ ಆಯ್ಕೆಯಾಗಿದ್ದಾರೆ. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸಹಕರಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಸಾರ್ವಜನಿಕರಲ್ಲಿ ಕೂತುಹಲ ಮೂಡಿಸಿದ ಪ್ರತಿಷ್ಠಿತ ಕಣವಾದ ಬಳ್ಕೂರು ವಿ ಎಸ್ ಎಸ್ ಬ್ಯಾಂಕ್ ಚುನಾವಣೆಯಲ್ಲಿ ಕೇಶವ ನಾಯ್ಕ ಹಾಗೂ ಶಂಭು ಬೈಲಾರ ನೇತ್ರತ್ವದ ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಅದರಂತೆ ಇಂದು ಅಧ್ಯಕ್ಷ ಹಾಗೂ ಉಪಾದ್ಯಕ್ಷ ಆಯ್ಕೆ ನಡೆಯಿತು. ಈ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಶಂಭು ಬೈಲಾರ ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಬಿಟಿ ಆಯ್ಕೆಯಾಗಿದ್ದಾರೆ. ನಂತರ ಕೇಶವ ನಾಯ್ಕ ಮಾತನಾಡಿ 2017 ರ ಚುನಾವಣೆಯಲ್ಲಿ ನನ್ನ ಹಾಗೂ ಶಂಭು ಬೈಲಾರ ನೇತ್ರತ್ವದ ತಂಡಕ್ಕೆ ಗೆಲುವನ್ನು ತಂದು ಕೊಟ್ಟ ಎಲ್ಲಾ ರೈತ ಬಾಂದವರಿಗೆ, ಷೇರುದಾರರಿಗೆ, ಠೇವಣಿದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು, ಇವತ್ತಿನ ಅದ್ಯಕ್ಷ ಉಪಾದ್ಯಕ್ಷ ಚುನಾವಣೆಯಲ್ಲಿ ಸಹಕಾರ ನೀಡಿದ ಚುನಾವಣಾ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಬಿಜೇಪಿ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದ್ರು.

RELATED ARTICLES  ಮಾರುತಿ ಗೌಡರಿಗೆ ಚೇಂಜ್ ಮೇಕರ್ ಪ್ರಶಸ್ತಿ

ನೂತನ ಅಧ್ಯಕ್ಷರಾದ ಶಂಭು ಬೈಲಾರ ಹಾಗೂ ನೂತನ ಉಪಾಧ್ಯಕ್ಷ ಗಣಪತಿ ನಾಯ್ಕ ಬಿಟಿ ಮಾತನಾಡಿ ತಮ್ಮನ್ನು ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಅವಿರೋದ ಆಯ್ಕೆ ಮಾಡಿದಾರೆ, ಅಯ್ಕೆ ಮಾಡುವಲ್ಲಿ ಸಹಕರಿಸಿದ ನೂತನ ಸಧಸ್ಯರಿಗೆ ಹಾಗೂ ರೈತಭಾಂದವರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗು

RELATED ARTICLES  ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

ಈ ಸಂಧರ್ಭದಲ್ಲಿ ಚುನಾಯಿತ ಪ್ರತಿನಿಧಿಗಳಾದ ಕೆ ಜಿ ಕರಿಮಣಿ, ರಾಜೇಶ ಪುಜಾರಿ, ಮಹೇಶ ಹೆಗಡೆ, ಲಕ್ಷ್ಮೀ ಪಂಡಿತ, ಸುಬ್ರಾಯ ನಾಯ್ಕ, ದರ್ಮ ನಾಯ್ಕ, ಗಣಪತಿ ನಾಯ್ಕ, ರಾಧಾ ನಾಯ್ಕ, ಮುಂತಾದವರು ಉಪಸ್ಥಿತರಿದ್ರು..

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುನೀಲ್ ನಾಯ್ಕ, ಬಿಜೇಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಸಿ ಎಸ್ ನಾಯ್ಕ, ಮುಂತಾದವರು ಆಗಮಿಸಿ ನೂತನ ಅಧ್ಯಕ್ಷ ಹಾಗೂ ಉಪಾದ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು,