ಅವಿಚ್ಛಿನ್ನ ಶಂಕರ ಪರಂಪರೆಯ ೩೫ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ‌ರ ಶ್ರೀಶ್ರೀ ರಾಘವೇಂದ್ರಭಾರತಿ ಮಹಾಸ್ವಾಮಿಗಳವರ ಆರಾಧನೆಯ ದಿನದಂದು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳಗಳವರ ಅನುಗ್ರಹ ಸಂದೇಶದ ಪ್ರಮುಖಾಂಶಗಳು. (ಕುಮಟಾದ ಸುವರ್ಣಗದ್ದೆಯ ಮಂಜುನಾಥ ಭಟ್ಟರವರ ಮನೆಯಲ್ಲಿ ನಡೆದ ಕಾರ್ಯಕ್ರಮ)
~
ಗುರುವಿಗಿಂತ ದೊಡ್ಡ ಸಂಗತಿ ಪ್ರಪಂಚದಲ್ಲಿ ಯಾವುದೂ ಇಲ್ಲ.

RELATED ARTICLES  ನಾಗರಾಜ ನಾಯಕ ತೊರ್ಕೆ ಯವರಿಂದ ಮನೆ ಮನೆ ಭೇಟಿ.

ದೊಡ್ಡದು ಎಂದು ನಿರುಪಾಧಿಕವಾಗಿ ಹೇಳಬಹುದಾದದ್ದು ಗುರುವಿಗೆ.

ತೀರಿಸಲಾಗದ ಋಣ ಗುರುವಿನದ್ದು.

ಧನ್ಯತೆಯ ಪ್ರಕಟೀಕರಣವೇ ಆರಾಧನೆ.

ವಿದ್ಯೆ ಅಂತಃಕರಣಕ್ಕೆ ಇಳಿದರೆ ವಿನಯ ಬರುತ್ತದೆ.

RELATED ARTICLES  ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

ಹಿಗ್ಗೂ ಕುಗ್ಗೂ ಎರಡೂ ಸಲ್ಲ ಬದುಕಿಗೆ.

ಸಮತೋಲನ ಇರಲಿ ಬದುಕಲ್ಲಿ.

ಪುಸ್ತಕವಲ್ಲ ಮಸ್ತಕ ಮುಖ್ಯ.

ಒಂದು ಹೆಜ್ಜೆ ತಪ್ಪಿದರೆ ಪತನವೇ.

ಪ್ರತಿ ಹೆಜ್ಜೆಯಲ್ಲೂ ಗುರುತತ್ತ್ವದ ನೆನಪಿರಲಿ.