ಕಾರವಾರ: ಡಿಸೆಂಬರ್ 8,9,10ರಂದು ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ಕರಾವಳಿ ಉತ್ಸವದ ಸ್ಮರಣ ಸಂಚಿಕೆ ಕಿನಾರೆ-2017ಕ್ಕೆ ಲೇಖನಗಳನ್ನು ಆಹ್ವಾನಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವೈವಿದ್ಯತೆ, ಆಹಾರ ಸಂಸ್ಕೃತಿ, ಸಾಧಕರು, ಸ್ವಚ್ಚತೆಯ ವಿಶೇಷಗಳು, ಪ್ರವಾಸೋದ್ಯಮ, ಜೀವ ವೈವಿದ್ಯತೆ, ಸಾಂಸ್ಕೃತಿಕ ಬದುಕು ವಿಷಯಗಳನ್ನಾಧರಿಸಿದ ಲೇಖನಗಳನ್ನು ನುಡಿ ಅಕ್ಷರದಲ್ಲಿ 300ರಿಂದ 400 ಪದಗಳನ್ನು ಮೀರದಂತೆ ಸಂಬಂಧಿಸಿದ ಉತ್ತಮ ಗುಣಮಟ್ಟದ ಗರಿಷ್ಠ 2 ಛಾಯಾಚಿತ್ರಗಳೊಂದಿಗೆ ದಿನಾಂಕ 2.12.2017ರೊಳಗೆ ಇಮೇಲ್ [email protected], ಇಲ್ಲಿಗೆ ಕಳಿಸಬಹುದು.

RELATED ARTICLES  ಮುಂದುವರಿದ ಮಳೆ : ನಾಳೆಯೂ ರಜೆ

ಸ್ಮರಣ ಸಂಚಿಕೆ ಸಮಿತಿ ಅಂತಿಮವಾಗಿ ಆಯ್ದ ಲೇಖನಗಳನ್ನು ಪ್ರಕಟಿಸಲಾಗುವುದು ಎಂದು ಎಲ್.ಚಂದ್ರಶೇಖರ ನಾಯಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ, ಉತ್ತರ ಕನ್ನಡ ಹಾಗೂ ಅಧ್ಯಕ್ಷರು, ಪ್ರಚಾರ ಮತ್ತು ಸ್ಮರಣ ಸಂಚಿಕೆ ಸಮಿತಿ, ಕರಾವಳಿ ಉತ್ಸವ, ಕಾರವಾರ ಇವರು ತಿಳಿಸಿದ್ದಾರೆ.

RELATED ARTICLES  ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಅಧಿಕಾರಿ ವರ್ಗದ ವಿವಿಧ ಹುದ್ದೆಗಳ ನೇರ ನೇಮಕಾತಿ.