ಕಾರವಾರ: ಜಿಲ್ಲೆಯ ಕಾರವಾರ, ಕುಮಟಾ, ಮತ್ತು ಸಿದ್ದಾಪುರ ತಾಲ್ಲೂಕಿನ 3 ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ 3 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಚುನಾವಣೆ ಅಧಿಸೂಚನೆಯನ್ನು ನ. 27 ರಂದು ಹೊರಡಿಸಲಾಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ನ. 30 ಕೊನೆಯ ದಿನವಾಗಿದೆ. ನಾಮಪತ್ರಗಳನ್ನು ಡಿಸೆಂಬರ 1 ರಂದು ಪರಿಶೀಲಿಸಲಾಗುವುದು.

RELATED ARTICLES  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೋರಾಟ : ಆರೋಗ್ಯ ಸಚಿವರ ಸ್ಪಂದನೆ

ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿ. 4 ಕೊನೆಯ ದಿನ, ಮತದಾನವನ್ನು ಡಿಸೆಂಬರ್ 17, ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ಮರುಮತದಾನವನ್ನು ನಡೆಸಬೇಕಾದ ದಿನಾಂಕ ಡಿ. 19 ಆಗಿದ್ದು ಮತ ಎಣಿಕೆಯನ್ನು ಡಿ. 20 ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES  ಹಿರೇಗುತ್ತಿ ಹೈಸ್ಕೂಲಿಗೆ ಶೈಕ್ಷಣಿಕ ಪ್ರಗತಿ ಪರಿಶೀಲನೆ ತಂಡ ಭೇಟಿ