ಬೆಂಗಳೂರು: ಬೆಂಗಳೂರಿನ ಮಾರತ್ ಹಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಅಲೋಫ್ಟ್ ಹೊಟೆಲ್ ಒಂಭತ್ತನೇ ಮಹಡಿಯಿಂದ ಹಾರಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳು ನಾಡಿನ ಕಾರೈಕುಡಿ ಮೂಲದ ವಿ. ವಲ್ಲಿಯಮ್ಮೈ (34) ಆತ್ಮಹತ್ಯೆಗೆ ಶರಣಾಗಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

RELATED ARTICLES  ಎಪ್ರಿಲ್ 12ಕ್ಕೆ ಮತ್ತೆ ಕರ್ನಾಟಕ ಬಂದ್ ಆಗುತ್ತಾ? ಬಂದ್! ಬಂದ್!

ವೈಟ್ ಫೀಲ್ಡ್ ಶಾಖೆಯ ಡಿಸಿಪಿ ಆಗಿರುವ ಅಬ್ದುಲ್ ಅಹಾದ್ ಹೇಳಿದಂತೆ ಆಕೆ ಪೇಂಟಿಂಗ್ ಕಿಟ್ ಒಂದನ್ನು ಹಿಡಿದು ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಹಾರಿದ್ದಾರೆ. ಭಾನುವಾರ ಸಂಜೆ ಹೋಟೆಲ್ ನಲ್ಲಿ ಕೋಣೆ ಪಡೆದಿದ್ದ ಮಹಿಳೆ ತನ್ನ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ನಾವು ಆಕೆಯ ಪತಿ ಹಾಗೂ ಮಕ್ಕಳ ಮಾಹಿತಿಗಾಗಿ ಹುಡುಕುತ್ತಿದ್ದೇವೆ.

RELATED ARTICLES  ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ

ಮಾರತ್ ಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬ್ಯುಸಿನೆಸ್ ಪಾರ್ಕ್ ನಲ್ಲಿ ಇದು ಎರಡನೇ ಆತ್ಮಹತ್ಯೆ ಪ್ರಕರಣ ಆಗಿದೆ.