ಭಟ್ಕಳ:ಬಡವರ ಮೇಲೆ ಅರಣ್ಯ ಇಲಾಖೆಯ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಪಾಬಾದ್‍ನಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯ ಮಾಡಿಕೊಂಡಿದ್ದ ಅಮಾಯಕ ಬಡ ಮಹಿಳೆಯೊಬ್ಬರ ಮನೆಯನ್ನು ಕೆಡವಿದ ಘಟನೆ ವರದಿಯಾಗಿದೆ. ದಿನದಿಂದ ದಿನಕ್ಕೆ ಭಟ್ಕಳ ತಾಲೂಕಿನಲ್ಲಿ ಅಮಾಯಕ ಬಡ ಜನಸಾಮಾನ್ಯರ ಮೇಲೆ, ಸರಕಾರದ ಇಲಾಖೆಗಳ ಅಧಿಕಾರಿಗಳು ದಬ್ಬಾಳಿಕೆ ನಡೆಸುವುದು ಒಂದು ರೀತಿಯಲ್ಲಿ ಪ್ಯಾಷನ್ ಆಗಿ ಹೋಗಿದೆ ಎಂದರೆ ತಪ್ಪಾಗಲಾರದು. ಅರಣ್ಯ ಇಲಾಖೆಯು ಅರಣ್ಯ ರಕ್ಷಣೆ, ಅರಣ್ಯ ಪರಿಪಾಲನೆ ಎಂಬ ನೆಪವನ್ನು ಮುಂದಿಟ್ಟುಕೊಂಡು, ಅಮಾಯಕರ ರಕ್ತವನ್ನು ಹಿರುತ್ತಿದ್ದಾರೆ. ಇದಕ್ಕೆ ಉತ್ತಮ ಉದಾರಣೆ ಎಂದರೆ ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಪಾಬಾದ್‍ನಲ್ಲಿ ಒಂದು ಬಡ ಅಮಾಯಕ ಹೆಣ್ಣು ಮಗಳು ಅನೇಕ ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದು ಆ ಸ್ಥಳಕ್ಕೆ ಈಗಾಗಲೇ ಜಿ.ಪಿ.ಆರ್.ಎಸ್. ಆಗಿದ್ದು ಹಾಗೋ ಹೀಗೋ ಒಂದು ಚಿಕ್ಕ ಮನೆಯನ್ನು ಕಟ್ಟಿಕೊಂಡು ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಗುಬ್ಬಿಯ ಮೇಲೆ ಭ್ರಮ್ಮಾಸ್ತ್ರವನ್ನು ಪ್ರಯೋಗ ಮಾಡುವಂತೆ ಏಕಾಏಕಿ ತಮ್ಮ ಅಧಿಕಾರದ ದರ್ಪದಿಂದ ಅಮಾನವಿಯವಾಗಿ ಆ ಅಮಾಯಕಳ ಮನೆಯನ್ನು ಕೆಡುವಿಹಾಕುವುದರ ಮೂಲಕ ಅಮಾಯಕಳೊಬ್ಬಳ ಬದುಕನ್ನೇ ನಾಶಮಾಡಿದ್ದಾರೆ.
ಈ ಬಗ್ಗೆ ಮನೆ ಕಳೆದುಕೊಂಡವಳ ಸಂಬಂದಿ ಈಶ್ವರ ಮೊಗೇರ್ ಮಾತನಾಡಿ ಈ ಜಾಗವನ್ನು ನಾವು 20 ವರ್ಷಗಳಿಂದ ರೂಡಿಸಿಕೊಂಡು ಬರುತ್ತಿದ್ದು, ವಾಸ್ತವ್ಯದ ಸಲುವಾಗಿ ನಾವು ಸಣ್ಣದಾಗಿ ಮನೆಯನ್ನು ಕಟ್ಟಿರುತ್ತೇವೆ. ಆದರೆ ಅರಣ್ಯ ಇಲಾಖೆಯವರು ಏಕಾಏಕಿ ಬಂದು ಮನೆಯನ್ನು ಕೆಡುವಿಹಾಕಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯ ಲೊಕೇಶ ಎನ್ನುವವರು ಐದು ಸಾವಿರ ಹಣವನ್ನು ಕೇಳುತ್ತಿದ್ದಾರೆ. ಹಣ ಕೊಡದ ಹಿನ್ನೆಲೆಯಲ್ಲಿ ಮನೆಯನ್ನು ತೆರವು ಮಾಡಿರುತ್ತಾರೆ. ಅರಣ್ಯ ಇಲಾಖೆಯವರ ಅನಾಚಾರದ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಸಂಪೂರ್ಣ ದಾಖಲೆಗಳನ್ನು ತೆಗೆದುಕೊಂಡು ನಾನು ಮಾಧ್ಯಮದ ಎದುರು ಬರುತ್ತೆನೆ ಹಾಗು ಈ ಮನೆಯನ್ನು ನೆಲಸಮ ಮಾಡಬೇಡಿ ನಾನು ಆ ಬಗ್ಗೆ ಕೂಲಂಕೂಶವಾಗಿ ಪರಿಶಿಲನೆ ಮಾಡುತ್ತೆನೆ ಎಂದು ಜನಪ್ರತಿನಿದಿಗಳಾದ ಶಾಸಕ ಮಂಕಾಳ ವೈದ್ಯರು ಹೇಳಿದರು ಸಹ ಲೆಕ್ಕಿಸದ ಇಲಾಖಾ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಎಲ್ಲದಕಿಂತ ಮುಖ್ಯವಾಗಿ ಅಷ್ಟು ದೊಡ್ಡ ಮನೆಯನ್ನು ಕಟ್ಟುವಾಗ ಈ ಅರಣ್ಯ ಇಲಾಖಾ ಅಧಿಕಾರಿಗಳು ಎಲ್ಲಿ ಹೊಗಿದ್ದರು ಅಥವಾ ಕಟ್ಟುವವರೆಗೆ ಸುಮ್ಮನಿದ್ದು ಕಟ್ಟಿದ ನಂತರ ಹಣಕ್ಕಾಗಿ ಬೇಡಿಕೆ ಇಟ್ಟು ಮನೆಯವರು ಹಣವನ್ನು ಕೊಡದೆ ಇರುವುದರಿಂದ ರೊಚ್ಚಿಗೆದ್ದು ಮನೆಯನ್ನು ತೆರವು ಮಾಡಿರಬಹುದು ಎಂದು ಈಶ್ವರ ನಾಯ್ಕ ಅವರ ಹೇಳಿಕೆಯಿಂದ ದೃಡಪಟ್ಟಂತೆ ಕಾಣುತ್ತದೆ.
ಈ ಅರಣ್ಯ ಇಲಾಖೆ ಇನ್ನು ಅಮಾಯಕ ಬಡಜನತೆಗೆ ಯಾವ ರೀತಿಯಲ್ಲಿ ನ್ಯಾಯವನ್ನು ಕೊಟ್ಟಿತು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಇನ್ನಾದರು ಅರಣ್ಯ ಇಲಾಖಾ ಅಧಿಕಾರಿಗಳು ಅಮಾಯಕರ ಮೇಲೆ ನಡೆಸುವ ದಬ್ಬಾಳಿಕೆ ನಿಲ್ಲಿಸುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.