ಶಿರಸಿ: ಬಿಜೆಪಿಯ ಪರಿವರ್ತನಾ ರ್ಯಾಲಿಯ ಯಶಸ್ಸನ್ನು ತಡೆದುಕೊಳ್ಳಲಾಗದೇ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ನವರು ಜಿಲ್ಲೆಯ 6 ಕ್ಷೇತ್ರಗಳಿಗೆ ಕರೆಸುತ್ತಿದ್ದಾರೆ. ಆದರೆ ಇದರಿಂದ ಬಿಜೆಪಿ ಅಲೆ ತಡೆಯಲು ಸಾಧ್ಯವಿಲ್ಲ. ಜನರಲ್ಲಿ ಬಿಜೆಪಿ ಪರ ವಿಶ್ವಾಸವಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಎಪಿಎಮ್‍ಸಿ ಪ್ರಾಂಗಣದಲ್ಲಿರುವ ರೈತ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ನಡೆದ ಪರಿವರ್ತನಾ ರ್ಯಾಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶ್ವಸಿಯಾಗಿದೆ ನಡೆದಿದೆ. ನಮಗೆ ಎಷ್ಟರ ಮಟ್ಟಿಗೆ ಬೆಂಬಲ ವ್ಯಕ್ತವಾಗಿದೆಯೆಂದರೆ ಕಾಂಗ್ರೆಸ್ ನವರಿಗೆ ಬಿಜೆಪಿಯ ಓಟವನ್ನು ತಡೆಯಲು ಆಗ್ರಹ ವ್ಯಕ್ತವಾಗಿದೆ. ಇದನ್ನು ನೊಡಿದಲ್ಲಿ ಬಿಜೆಪಿಗೆ ನಿಶ್ಚಿತವಾಗಿ 160ಕ್ಕೂ ಅಧಿಕ ಸ್ಥಾನ ಬರಲಿದೆ. ಜಿಲ್ಲೆಯ ಎಲ್ಲಾ ಕಡೆ ಉತ್ತಮವಾಗಿ ಸ್ಪಂದನೆ ದೊರಕಿದ್ದು, ಪಕ್ಷ ಸಧೃಡವಾಗಿದೆ ಎಂದರು.

RELATED ARTICLES  ಮಿಸ್ಟರ್ ಏಷಿಯಾ ದೇಹದಾರ್ಢ್ಯತೆಯಲ್ಲಿ ಮಣಿಕಂಠ ಮುರ್ಡೇಶ್ವರ ನಿಗೆ 3 ನೇ ಸ್ಥಾನ:ಸಹಾಯ ಹಸ್ತದ ನೀರಿಕ್ಷೆಯಲ್ಲಿ ಮಣಿಕಂಠ

ಚಂದ್ರಶೇಖರ ಪಾಟೀಲ್ ಅವರ ಹೇಳಿಕೆಗಳು ಸಾಹಿತ್ಯ ವೇದಿಕೆಗೆ ಗೌರವ ತರುವಂತಹದ್ದಲ್ಲ. ಇದೊಂದು ಸರ್ಕಾರ ಚಮಚಾಗಿರಿ ಮಾತಾಗಿದೆ. ಚಂಪಾ ಅವರ ರಾಜಕೀಯ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು ಖಂಡಿಸಬೇಕು. ಅವರಿಗೆ ರಾಜಕೀಯ ಬೇಕಿದ್ದರೆ ನೇರವಾಗಿ ಯಾವುದಾರು ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಲಿ. ಅದನ್ನು ಬಿಟ್ಟು ಕಾಂಗ್ರೆಸ್ ಚಮಚಾಗಿರಿ ಮಾಡುವುದು ಸರಿಯಲ್ಲ ಎಂದರು.

RELATED ARTICLES  ಭಾವಿಕೇರಿ ಬೆಳ್ಳಿಹಬ್ಬದ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಕೆ.ಜಿ.ನಾಯ್ಕ, ರಾಮು ರಾಯ್ಕರ್, ದಿನಕರ ಶೆಟ್ಟಿ, ಜೆ.ಡಿ.ನಾಯ್ಕ, ಶಿವಾನಂದ ನಾಯ್ಕ, ಕೃಷ್ಣ ಎಸಳೆ ಮುಂತಾದವರು ಇದ್ದರು.