ಮುಂಡಗೋಡ: ನಗರದ ಗಣೇಶ ನಗರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ಅತಿ ವಿಜ್ರಂಭಣೆಯಿಂದ ನಡೆಯಿತು.

ಜಾತ್ರೆಯ ನಿಮಿತ್ತವಾಗಿ ಶ್ರೀ ಮಾರಿಕಾಂಬ ದೇವಿಗೆ ಉಡಿತುಂಬಿ ಕಾರ್ಯಕ್ರಮ ಜರುಗಿತು ದೇವರಿಗೆ ಮಹಾ ಪೂಜೆ, ಮಹಾ ಅಭಿಷೇಕ ಹಾಗೂ ಬಿಲ್ಲಿನ ಪೂಜೆ ನಡೆದು ಶ್ರೀ ಮೈಲಾರಲಿಂಗೇಶ್ವರನ ಪಲ್ಲಕ್ಕಿ ಉತ್ಸವ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯ ಪ್ರವೇಶಿಸಿತು. ಬಳಿಕ ಜಾತ್ರಾ ಕಾರ್ಯಗಳು ಪ್ರಾರಂಭವಾಯಿತು. ಹತ್ತಾರು ಜನ ಗ್ವಾರಪ್ಪಜ್ಜರಿಂದ ಮೈಮೇಲೆ ಬಾಸುಂಡೆ ಬರುವ ರೀತಿ ಬಾರಿಕೋಲಿನಿಂದ ಹೊಡೆದುಕೊಳ್ಳುವುದು ಸೇರಿದಂತೆ ಡೋಣಿ ತುಂಬುವುದು, ಸರಪಳಿ ಪವಾಡ, ಶಸ್ತ್ರ ಪವಾಡ, ಶಿವದಾರ ಪವಾಡ ಆರತಿ ಪವಾಡಗಳು ನಡೆದವು.

RELATED ARTICLES  ದೀವಗಿ ಗ್ರಾ.ಪಂ ಗೆ ಜಗದೀಶ ಭಟ್ಟ ಅಧ್ಯಕ್ಷ.

ದಪ್ಪ ಗಾತ್ರದ ಸರಪಳಿಯನ್ನು ಕೆಲವೇ ಕ್ಷಣಗಳನ್ನು ಭಕ್ತಾಧಿಗಳು ಕೈಯಿಂದ ಜಗ್ಗಿ ತುಂಡರಿಸುವುದರಿಂದ ಸರಪಳಿ ಪವಾಡ ವಿಶೇಷವೆನಿಸಿತು. ಸಹಸ್ರ ಸಂಖ್ಯೆಯಲ್ಲಿ ದಂಡು ದಂಡಾಗಿ ಆಗಮಿಸಿದ ಭಕ್ತಾಧಿಗಳು ಹಣ್ಣು ಕಾಯಿ ಸಮರ್ಪಣೆ, ಉಡಿ ಸೇವೆ ಸೇರಿದಂತೆ ಹಲವು ರೀತಿಯ ಸೇವೆ ಸಲ್ಲಿಸಿದರು. ಮಹಾ ಮಂಗಳಾರತಿ, ಪ್ರಸಾದ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಒಟ್ಟಾರೆ ಜಾತ್ರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.

RELATED ARTICLES  ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಲಿ ಸಂಸದರು ಸ್ಪಂದಿಸಿಲ್ಲ : ಆನಂದ ಅಸ್ನೋಟಿಕರ್.