ನವದೆಹಲಿ: ನೀವು ಮಾಡಿದ ಸಾಧನೆ ಅಸಾಧಾರಣವಾದುದು. ಬಾಲ್ಯದಲ್ಲಿ ನೀವು ಚಹಾ ಮಾರಿ ಆಮೇಲೆ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಪಟ್ಟಕ್ಕೇರುವ ಮೂಲಕ ಬದಲಾವಣೆ ಸಾಧ್ಯ ಎಂಬುದನ್ನು ನೀವು ತೋರಿಸಿಕೊಟ್ಟಿರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹೇಳಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್ )ಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿ ಅಮೆರಿಕದ ಉನ್ನತ ಅಧಿಕಾರಿಗಳ ನಿಯೋಗದ ನೇತೃತ್ವ ವಹಿಸಿರುವ ಇವಾಂಕಾ ಟ್ರಂಪ್ ಈ ಮಾತುಗಳನ್ನಾಡಿದ್ದಾರೆ.

RELATED ARTICLES  ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಗೆ ಬೆಂಕಿ

ಮಹಿಳೆಯರ ಸಬಲೀಕರಣ ಸಾಧ್ಯವಾಗದೆ ಯಾವುದೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಬಲವಾಗಿ ನಂಬಿರುವ ಮೋದಿಯರ ದೃಢ ನಿರ್ಧಾರವನ್ನು ನಾನು ಮೆಚ್ಚುತ್ತೇನೆ ಎಂದು ಇವಾಂಕಾ ಹೇಳಿದ್ದಾರೆ.

ಸ್ವಾತಂತ್ರ್ಯದ 70ನೇ ವರ್ಷಾಚರಣೆ ಮಾಡುತ್ತಿರುವ ಭಾರತೀಯರನ್ನು ಅಭಿನಂದಿಸಿ ಇವಾಂಕಾ ತಮ್ಮ ಭಾಷಣ ಆರಂಭಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಕ್ಷಿಪ್ರ ಪ್ರಗತಿಯನ್ನು ಹೊಂದುತ್ತಿದ್ದು ನಾನಿದನ್ನು ಅಭಿನಂದಿಸುತ್ತೇನೆ. ಮುತ್ತುಗಳ ನಗರವಾದ ಈ ಸ್ಥಳದ ದೊಡ್ಡ ಸಂಪತ್ತು ಎಂದರೆ ನೀವೇ ಎಂದು ಶೃಂಗಸಭೆಯಲ್ಲಿ ಭಾಗವಹಿಸಿದ ಉದ್ಯಮಿಗಳನ್ನುದ್ದೇಶಿಸಿ ಇವಾಂಕಾ ಹೇಳಿದ್ದಾರೆ.

RELATED ARTICLES  ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ

ನೀವು ಸಾಂಪ್ರದಾಯಿಕ ಚೌಕಟ್ಟುಗಳಲ್ಲಿ ಬದಲಾವಣೆಯನ್ನು ತರುತ್ತಿದ್ದೀರಿ. ಭಾರತ ಮತ್ತು ಶ್ವೇತ ಭವನದ ನಡುವೆ ಎಂದಿದೆಂಗೂ ಉತ್ತಮ ಬಾಂಧವ್ಯವಿರಲಿದೆ. ಅದೇ ವೇಳೆ ಭಾರತದ ಉದ್ಯಮ ನೀತಿಯನ್ನು ಹೊಗಳಿದ ಇವಾಂಕಾ, ಭಾರತ ಜಗತ್ತಿಗೆ ಉತ್ತೇಜನ ನೀಡುತ್ತಿದೆ, ಮೋದಿ ನೇತೃತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎಂದಿದ್ದಾರೆ.