ಕಾರವಾರ : ಜಿಲ್ಲೆಯಲ್ಲಿ ಇ-ಸ್ವತ್ತು ಸೇವಾ ಯೋಜನೆ ನಿಯಮಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಡಿಸೆಂಬರ್ 6 ಮತ್ತು 7 ರಂದು ಜಿಲ್ಲೆಗೆ ಸಿಎಂ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ್ ನಾಯಕ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯ ನಡುವಳಿಗಳ ಮೇಲಿನ ಪಾಲನಾ ವರದಿ ಪರಿಶೀಲಿಸಿ ಮಾತನಾಡಿದ ಅವರು, ಇ-ಸ್ವತ್ತು ಯೋಜನೆ ಸೇವೆಯಲ್ಲಿ, ಗ್ರಾಮೀಣ ಪ್ರದೇಶದ ಜನ, ನಗರ ಪ್ರದೇಶದಲ್ಲಿ ಆಸ್ತಿ ಖರೀದಿಸಿದಾಗ ಅಧಿಕಾರಿಗಳು ಪ್ರಮಾಣ ಪತ್ರಗಳಿಗಾಗಿ ಅಲೆದಾಡಿಸುತ್ತಾರೆ. ಈ ಬಗ್ಗೆ ಗಮನಹರಿಸಬೇಕೆಂದು ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಸಿ.ಇ.ಒ ಅವರ ಗಮನಕ್ಕೆ ತಂದಾಗ, ಇದಕ್ಕೆ ಸ್ವಂದಿಸಿದ ಸಿಇಒ, ಜಿಲ್ಲೆಯ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ. ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದಾಗ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದು ಭರವಸೆ ನೀಡಿದರು.

RELATED ARTICLES  ಕರೋನಾ ವಾರಿಯರ್ಸ ಗೆ ನೆರವಾಗಿ ಮಾನವೀಯತೆ ಮೆರೆಯುತ್ತಿರುವ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು.

ಇದೇ ವೇಳೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2016-17 ನೇ ಸಾಲಿನ, ಕ್ರೀಡಾ ಸಾಮಗ್ರಿಗಳನ್ನು ವಿತರಿಸುವುದು ವಿಳಂಬವಾಗಿದೆ. ಒಂದು ವಾರದೊಳಗಾಗಿ ಜನಪ್ರತಿನಿಧಿಗಳ ಸಮ್ಮುಖದಲ್ಲೇ ವಿತರಿಸಬೇಕು. ಇಲ್ಲದೇ ಹೋದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಸೂಚನೆ ಕೊಟ್ಟಿದ್ದರು.

RELATED ARTICLES  ಮನೆ ಅಳಿಯ ಮಣ್ಣು ಸೇರಿದ! ಗೋಕರ್ಣದಲ್ಲಿ ವ್ಯಕ್ತಿಯ ಸಾವು ಕೊಲೆ ಎಂದ ಪೋಲೀಸರು?

ಶಿಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದ ಯಾವುದೇ ಸೌಲಭ್ಯ ವಿತರಣೆ, ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳಿಗೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಮತ್ತು ಜಿಲ್ಲಾ ಮಟ್ಟದ ಕೆ.ಡಿ.ಪಿ. ಸಭೆಗೆ ಜಿ.ಪಂ.ಸದಸ್ಯರು, ತಾಲೂಕ ಮಟ್ಟದ ಕೆ.ಡಿ.ಪಿ ಸಭೆಗೆ ತಾಲೂಕ ಪಂಚಾಯತ್ ಸದಸ್ಯರು ಹಾಜರಾಗಬೇಕೆಂಬ ಸರಕಾರದ ಸುತ್ತೋಲೆ ಇದೆ ಎಂದು ಜಿ.ಪಂ.ಉಪಕಾರ್ಯದರ್ಶಿ(ಆಡಳಿತ) ವಿವರಿಸಿದರು.