ಬೆಂಗಳೂರು: ಪದ್ಮಾವತಿ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ‘ಪ್ರತಾಪ್ ಸಿಂಹ ಫೊರ್ ಸಿಎಂ’ ಎಂಬ ಫೇಸ್ಬುಕ್ ಪೇಜ್ ಇತಿಹಾಸದ ಇಬ್ಬರು ವೀರ ವನಿತೆಯರ ಕುರಿತು ಅತ್ಯಂತ ಕೀಳು ಪೋಸ್ಟ್ ಹಾಕಿ ಅವಮಾನ ಮಾಡಿರುವ ವಿರುದ್ಧ ಆಕ್ರೋಶ ವ್ಯಾಪಕವಾಗಿದೆ.

RELATED ARTICLES  ಹೈದರಾಬಾದ್-ಕರ್ನಾಟಕ ಭಾಗದ ಜನರ ದಶಕಗಳ ಕನಸು ನನಸಾಗಿದೆ!

ರಾಣಿ ಚೆನ್ನಮ್ಮ ಮತ್ತು ಓಬವ್ವ ಅವರ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ಬರೆದು, ‘ಕೋಪ ಬಂತಲ್ವಾ, ಹಾಗಾದ್ರೆ ಕನ್ನಡ ಚಿತ್ರರಂಗಕ್ಕೆ ಇಂಥ ಕಥೆಗಳ ವಿರುದ್ಧ ಕೋಪ ಬರ್ತಿಲ್ವಾ ?’ ಎಂದು ಪ್ರಶ್ನಿಸಲಾಗಿತ್ತು.

RELATED ARTICLES  ಚಳಿಗಾಲದಲ್ಲೇ ವಿದ್ಯುತ್‌ ಬರ: ಜನತೆಗೆ ಶಾಕ್

ಕನ್ನಡ ಪರ, ಪ್ರಗತಿಪರ ಸಂಘಟನೆಗಳು, ಸಾರ್ವಜನಿಕರು ಪೋಸ್ಟ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಪೋಸ್ಟ್ ಹಾಕಿದವರನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.