ನವದೆಹಲಿ: ನಗದುರಹಿತ ಪಾವತಿ, ಹಣಕಾಸು ಸೇವೆ ಮತ್ತು ಇ–ಕಾಮರ್ಸ್‌ ವಹಿವಾಟು ವಿಸ್ತರಿಸಲು ₹ 20 ಸಾವಿರ ಕೋಟಿ ಹೂಡಿಕೆ ಮಾಡಲು ಮೊಬೈಲ್ ವಾಲೆಟ್‌ ಸಂಸ್ಥೆ ಪೇಟಿಎಂ ಉದ್ದೇಶಿಸಿದೆ.

‘ಮುಂದಿನ ಮೂರು ವರ್ಷಗಳಲ್ಲಿ ₹ 18 ಸಾವಿರ ಕೋಟಿಗಳಿಂದ ₹ 20 ಸಾವಿರ ಕೋಟಿಗಳಷ್ಟು ಬಂಡವಾಳ ತೊಡಗಿಸಲಾಗುವುದು. ಸಂಸ್ಥೆಯು ಇನ್ನೂ ಹಣ ಹೂಡಿಕೆ ಮಾಡುವ ಹಂತದಲ್ಲಿಯೇ ಇರುವುದರಿಂದ ಲಾಭದ ಬಗ್ಗೆ ನಾನು ಮಾತನಾಡಲಾರೆ’ ಎಂದು ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.

RELATED ARTICLES  ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಸಾವು.

‘ಹಣಕಾಸು ಮತ್ತು ಪೇಮೆಂಟ್ಸ್‌ ಸೇವೆಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ₹ 5 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ಇದುವರೆಗೆ ₹ 1,700 ಕೋಟಿ ಹೂಡಿಕೆ ಮಾಡಲಾಗಿದೆ. ಈ ವರ್ಷಾಂತ್ಯಕ್ಕೆ ಸಂಸ್ಥೆಯ ವಹಿವಾಟು ₹ 1 ಲಕ್ಷ ಕೋಟಿಗೆ ಏರುವ ನಿರೀಕ್ಷೆ ಇದೆ. ಪೇಟಿಎಂನಲ್ಲಿ ವಹಿವಾಟು ನಡೆಸುವ ವರ್ತಕರ ಸಂಖ್ಯೆ ಕೆಲವೇ ತಿಂಗಳಲ್ಲಿ 60 ಲಕ್ಷಕ್ಕೆ ಏರಿಕೆಯಾಗಲಿದೆ’ ಎಂದರು.

RELATED ARTICLES  ಶ್ರೀ ರಾಮಚಂದ್ರಾಪುರ ಮಠದ ಪರವಾಗಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ನೋಟು ರದ್ದತಿ ನಂತರ ಪೇಟಿಎಂನ ಮೊಬೈಲ್‌ ವಾಲೆಟ್‌, ರೀಚಾರ್ಜ್‌, ಬಿಲ್‌ ಪಾವತಿ ಸೇವೆ, ಇ–ಕಾಮರ್ಸ್‌ (ಪೇಟಿಎಂ ಮಾಲ್‌) ಮತ್ತು ಟಿಕೆಟ್‌ ಕಾಯ್ದಿರಿಸುವಿಕೆ ಸೇವೆಗಳು ಗಣನೀಯ ಏರಿಕೆ ಕಂಡಿವೆ.