ಗೋಕರ್ಣ : ಸಮೀಪದ ತದಡಿ ಬೇಲೇಕಾನ ಭಾಗದ ಸಾವಿರಾರು ಕುಟುಂಬಸ್ಥರಿಗೆ ತಿಂಗಳ ರೇಶನ್ ಪಡಿತರ ಪಡೆಯಲು ಇಲ್ಲಿನ ರೇಶನ್ ನೀಡುವ ಅಂಗಡಿಯಲ್ಲಿ ಸಮರ್ಪಕ ಗಣಕ ಯಂತ್ರ ಕೆಲಸ ಮಾಡುವದಿಲ್ಲ ಜತೆಗೆ ದೂರವಾಣಿ ಇಲಾಖೆಗೆ ಸಂಬಂಧಿಸಿದ ಬಿ.ಎಸ್.ಎನ್.ಎಲ್ ಲೈನ್ ಕನೆಕ್ಷನ್ ಸಿಗದೇ ಗುರುತಿನ ಥಂಬ್ ಮೂಡದೇ ತೀವ್ರ ಸಮಸ್ಯೆಯಾಗಿ ಜನರು ಪರದಾಡುವ ಪರಿಸ್ಥಿತಿ ಬಂದಿದೆ.

RELATED ARTICLES  ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ: ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ - ರಾಜೇಂದ್ರ

ರಿಪೇರಿ ಮಾಡುವ ಗೋಜಿಗೂ ಇಲಾಖೆಯವರಾರು ಬಾರದಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಜನತಾ ಕೋ-ಆಫ್ ಸೊಸೈಟಿ ಅಧ್ಯಕ್ಷೆ ಪುಷ್ಪಾ ಕಲೇಕರ, ಕಾಂಗ್ರೆಸ್ ಮುಖಂಡ ತೇಜಸ್ವಿ ನಾಯ್ಕ, ಗೋಕರ್ಣ ಗ್ರಾ.ಪಂ ಸದಸ್ಯೆ ಪಾರ್ವತಿ ನಾಯ್ಕ ಮುಂತಾದವರು ಕೂಡಲೇ ರೇಷನ್ ನೀಡುವ ವ್ಯವಸ್ಥೆ ಸುಗಮಗೊಳಿಸಿ, ಎಂದು ಸಂಬಂಧಿಸಿದ ಇಲಾಖೆಗೆ ತಿಳಿಸಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

RELATED ARTICLES  ಕಾಡು ಹಣ್ಣಿನ ಮೇಳದ ವಿಶೇಷ ಆಕರ್ಷಣೆ: ಜನ ಮನ ಸೂರೆಗೊಂಡಿತು ಕಾರ್ಯಕ್ರಮ.