ಹೊನ್ನಾವರ : ಕೇಂದ್ರ ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪಿಸುವ ಕಾರ್ಯ ಆಗಬೇಕು ಎನ್ನುವ ಉದ್ದೇಶದಿಂದ ಹೊನ್ನಾವರದ ವಿದ್ಯುತ್ತ ಕಛೇರಿಗೆ ತೆರಳಿ ಬಿ.ಜೆ.ಪಿಗರು ಮನವಿ ನೀಡಿದ್ರು. ಹೌದು ಮೋದಿ ಸರಕಾರ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಪಂಡಿತ ದೀನದಯಾಳ ಉಪಾಧ್ಯಾಯ ವಿದ್ಯುತ್ ಎನ್ನುವ ಯೋಜನೆಯಡಿಯಲ್ಲಿ ವಿದ್ಯುತ್ ಪೂರೈಸಲು ಮುಂದಾಗಿದೆ. ಅಲ್ಲದೆ, ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆ ಸಹ ಮುಗಿದಿರುತ್ತದೆ ಆದರೆ ಹೊನ್ನಾವರದಲ್ಲಿ ಈ ಯೋಜನೆಗೆ ಇನ್ನೂ ಚಾಲನೆ ದೊರಕಿಲ್ಲ, ಇದರಿಂದ ಯೋಜನೆಯ ಲಾಭ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಹೀಗಾಗಿ ಹೊನ್ನಾವರ ಬಿ.ಜೆ.ಪಿ ಮಂಡಳ ಮತ್ತು ಮಾಜಿ ಶಾಸಕ ದಿನಕರ ಶೇಟ್ಟಿ ನೇತೃತ್ವದಲ್ಲಿ ಈ ಯೋಜನೆಯನ್ನು ತ್ವರೀತಗತಿಯಲ್ಲಿ ಪ್ರಾರಂಬಿಸಬೇಕೆಂದು ಒತ್ತಾಯ ಮಾಡಲಾಯಿತು.

RELATED ARTICLES  ರಾಜ್ಯಮಟ್ಟದಲ್ಲಿ 8 ಸ್ಥಾನ ಪಡೆದು ಸಾಧನೆ ಮಾಡಿದ ಕೊಂಕಣದ ವಿದ್ಯಾರ್ಥಿಗಳು.

ಈ ವೇಳೆ ಕಾಮಗಾರಿಗಳನ್ನು ತಾವು ಹೆಚ್ಚಿನ ಮುತುವರ್ಜಿ ವಹಿಸಿ ಬಿಪಿಎಲ್ ಕಾರ್ಡುದಾರರಿಗೆ ವಿದ್ಯುತ್ ಸಂಪರ್ಕವನ್ನು ಕೊಡಬೇಕೆಂದು ಆಗ್ರಹಿಸಿ .ಹುಬ್ಬಳ್ಳಿ ವಿದ್ಯುತ್ ನಿಗಮ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.ಮನವಿ ಸ್ವಿಕರಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಭಿಯಂತರರಾದ ನಿತ್ಯಾಕುಮಾರಿ ಬಜಾಜ ಎಲೆಕ್ಟ್ರಿಕಲ್ ಎನ್ನುವ ಕಂಪನಿಗೆ ಟೆಂಡರ ಆಗಿದೆ ಟಂಡರ ಆದ ಕಂಪನಿಯ ಜೊತೆ ಮಾತನಾಡಿ ಶೀಘ್ರದಲ್ಲಿ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದರು. ಬಳಿಕ ಮಾತನಾಡಿದ ಮಾಜಿ ಶಾಸಕ ದಿನಕರ ಶೆಟ್ಟಿ ಬಡವರಿಗಾಗಿ ಬಂದ ಯೋಜನೆಯನ್ನು ಶೇಘ್ರದಲ್ಲಿ ಜನರಿಗೆ ಮುಟ್ಟಿಸಬೇಕು ಎನ್ನುವ ಉದ್ದೇಶದಿಂದ ಈ ಮನವಿ ನೀಡಿದ್ದೇವೆ ಎಂದರು.

RELATED ARTICLES  ಕತಗಾಲ ವಲಯದಲ್ಲಿ ವನಮಹೋತ್ಸವ ಹಾಗೂ ಬೀಜದುಂಡೆ ಅಭಿಯಾನ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ನಾಯ್ಕ ತೊರ್ಕೆ
ಮಾತನಾಡಿ ಕೇಂದ್ರ ಸರಕಾರದಿಂದ ಜಿಲ್ಲೆಗೆ ಸಾಕಷ್ಟು ಯೋಜನೆಗಳು ಬಂದಿದೆ. ಅತಂಹ ಯೋಜನೆಯನ್ನು ಆದಷ್ಟು ಬೇಗ ಅಧಿಕಾರಿಗಳು ಸಾರ್ವಜನಿಕರನ್ನು ಮುಟ್ಟಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುನೀಲ ನಾಯ್ಕ ಭಟ್ಕಳ, ಬಿ ಜೆ ಪಿ ತಾಲೂಕಾ ಅಧ್ಯಕ್ಷ. ಸುಬ್ರಾಯ ನಾಯ್ಕ, ವೆಂಕಟ್ರಮಣ ಹೆಗಡೆ, ವಿನೋದ ನಾಯ್ಕ ರಾಯಲಕೇರಿ, ಎಮ್.ಎಸ್ ಹೆಗಡೆ ಕಣ್ಣಿ, ರಾಜು ಭಂಡಾರಿ, ಮಂಜುನಾಥ ನಾಯ್ಕ, ವಿನೋದ ನಾಯ್ಕ, ದೀಪಕ ಶೇಟ್, ಲೋಕೇಶ ಮೇಸ್ತ, ಗಣೇಶ ಪೈ ಹಳದೀಪುರ ಮುಂತಾದವರು ಉಪಸ್ಥಿತರಿದ್ದರು..